ಚೀತಾ ಕರೆತರಲು ವಿಮಾನದಲ್ಲಿ ವ್ಯವಸ್ಥೆ ಹೇಗಿತ್ತು ಗೊತ್ತಾ? ವಿಡಿಯೋ ಹಂಚಿಕೊಂಡ ರವೀನಾ ಟಂಡನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಮೀಬಿಯಾದಿಂದ ಎಂಟು ಚಿರತೆಗಳು ಭಾರತಕ್ಕೆ ಬಂದಿವೆ. ಪ್ರಧಾನಿ ಮೋದಿ ತಮ್ಮ ಜನ್ಮದಿನದಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಶನಿವಾರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಚಿರತೆಗಳನ್ನು ಕರೆತಂದ ಪ್ರಧಾನಿ ಮೋದಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ಪಟ್ಟಿಗೆ ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಸೇರಿಕೊಂಡಿದ್ದಾರೆ. ಚಿರತೆಗಳನ್ನು ದೇಶಕ್ಕೆ ಕರೆತರಲು ಕೇಂದ್ರ ಬೋಯಿಂಗ್ ವಿಮಾನದ ವ್ಯವಸ್ಥೆ ಮಾಡಲಾಗಿತ್ತು. ಬೋಯಿಂಗ್ 747 ವಿಮಾನದಲ್ಲಿ ಚಿರತೆಗಳನ್ನು ದೇಶಕ್ಕೆ ಸಾಗಿಸುತ್ತಿರುವ ವಿಡಿಯೋವನ್ನು ರವೀನಾ ಟಂಡನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಧನ್ಯವಾದ ಅರ್ಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!