ಚೆಂಡಿಗೆ ಹೊಳಪು ತರಲು ಜಾಕ್ ಲೀಚ್‌ ಬೋಳು ತಲೆ ಮೇಲೆ ತಿಕ್ಕಿದ ರೂಟ್! ‘ಬುದ್ಧಿವಂತ’ ಎಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಾಕಿಸ್ತಾನದ ರಾವಲ್ಪಿಂಡಿ ಕ್ರಿಕೆಟ್‌ ಸ್ಟೇಡಿಯಂ ನಲ್ಲಿ ಆತಿಥೇಯ ಪಾಕ್‌ ಹಾಗೂ ಇಂಗ್ಲೆಂಡ್ ನಡುವೆ ಸಾಗುತ್ತಿರುವ ಮೊದಲ ಟೆಸ್ಟ್‌ನಲ್ಲಿ ರನ್‌ ಪ್ರವಾಹವೇ ಹರಿದುಬಂದಿದೆ. ʼಕಳಪೆ ಪಿಚ್‌ʼ ಲಾಭ ಪಡೆದ ಎರೆಡೂ ತಂಡಗಳ ಬ್ಯಾಟ್ಸ್‌ ಮನ್‌ ಗಳು ಅಬ್ಬರಿಸಿದ್ದು  ಒಟ್ಟಾರೆ 1200 ಕ್ಕೂ ಹೆಚ್ಚು ರನ್‌ ರಾಶಿಯನ್ನು ಗುಡ್ಡೆಹಾಕಿವೆ. ಬ್ಯಾಟರ್‌ ಗಳ ಅಬ್ಬರದ ನಡುವೆ ಬೌಲರ್‌ ಗಳು ಬಳಲಿ ಬೆಂಡಾಗಿದ್ದಾರೆ. ಈ ನಡುವೆ ಇಂಗ್ಲೆಂಡ್‌ ಆಟಗಾರ ಜೋ ರೂಟ್‌ ಮಾಡಿದ ಒಂದು ಕೆಲಸ ಮೈದಾನದಲ್ಲಿ ವಿನೋದಮಯವಾದ ಸಂಗತಿಯಾಗಿ ಹೊರಹೊಮ್ಮಿದೆ. ಸಾಮಾಜಿಕ ತಾಣದಲ್ಲೂ ಈ ದೃಶ್ಯವು ಅಭಿಮಾನಿಗಳನ್ನು ರಂಜಿಸುತ್ತಿದೆ.
ಕ್ರಿಕೆಟ್‌ ಬಾಲಿಗೆ ಲಾಲಾರಸ (ಎಂಜಲು) ಬಳಕೆಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಷೇಧಿಸಿರುವುದರಿಂದ, ಕ್ರಿಕೆಟ್ ಚೆಂಡನ್ನು ಹೊಳೆಯುವಂತೆ ಮಾಡಲು ಕ್ರಿಕೆಟಿಗರು ಅಂಗೈ ಮತ್ತು ಹಣೆಯ ಬೆವರನ್ನು ಬಳಸುತ್ತಾರೆ. ಆದಾಗ್ಯೂ, 3 ನೇ ದಿನದಾಟದ ಸಮಯದಲ್ಲಿ ಜೋ ರೂಟ್ ಇದಕ್ಕೊಂದು ಹೊಸ ಪರಿಹಾರವನ್ನು ಕಂಡುಕೊಂಡಿದ್ದಾರೆ. ಸ್ಪಿನ್ನರ್ ಜಾಕ್ ಲೀಚ್ ಬೌಂಗ್‌ ಮಾಡುತ್ತಿರುವಾಗ ಅಲ್ಲಿಗೆ ಬಂದ ಜೋ ರೂಟ್ ಚೆಂಡಿಗೆ ಹೊಳಪು ನೀಡಲು ಆತನ‌ ʼಬೋಳುʼ ತಲೆಯ ಮೇಲೆ ಚೆಂಡನ್ನು ಉಜ್ಜಿದ್ದಾರೆ. ಈ ಘಟನೆ ಕ್ರೀಡಾಂಗಣದಲ್ಲಿ ನಗುವಿನ ಅಲೆಯನ್ನೇ ಉಕ್ಕಿಸಿದೆ.

ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 657 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದೆ. ಪ್ರತ್ಯುತ್ತರವಾಗಿ, ಬಾಬರ್ ಅಜಮ್  ಪಡೆ 579 ರನ್‌ ಗಳಿಸಿ ಆಲೌಟ್‌ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!