TECHNOLOGY| ಯುವಕನ ಆವಿಷ್ಕಾರ: ಸೈಕಲ್‌ ತುಳಿಯುತ್ತಾ ವಿಮಾನ ಓಡಿಸುವ ಪ್ರಯತ್ನಕ್ಕೆ ಹ್ಯಾಟ್ಸ್‌ ಆಫ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯುವಕನೊಬ್ಬ ಸೈಕಲ್ ತುಳಿಯುತ್ತಾ ವಿಮಾನ ಓಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಮಾನದಂತೆ ಕಾಣುವ ಲೋಹದ ಚೌಕಾಕಾರದ ಆವರಣದಲ್ಲಿ ಕುಳಿತು ಯುವಕನೊಬ್ಬ ಸೈಕಲ್‌ ಓಡಿಸಿದ್ದಾನೆ. ಆತ ಸೈಕಲ್‌ ತುಳಿಯುತ್ತಿದ್ದಂತೆ ಲೋಹದ ಹಾರುವ ಯಂತ್ರವು ವೇಗವಾಗಿ ಮುಂದಕ್ಕೆ ಚಲಿಸುತ್ತದೆ. ಸ್ವಲ್ಪ ಹೊತ್ತು ಗಾಳಿಯಲ್ಲಿ ತೇಲುತ್ತಾ ಮತ್ತೆ ನೆಲಕ್ಕಿಳಿದಿದೆ. ಮೊಹಮ್ಮದ್ ಜಶ್ಮದ್ ಎಂಬ ನೆಟಿಜನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಆ ಯುವಕನ ಪ್ರಯತ್ನ ಬೇಗ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!