‌ಪ್ರಾಣಾಪಾಯದಿಂದ ಕ್ಷಣಾರ್ಧದಲ್ಲಿ ವ್ಯಕ್ತಿ ಬಚಾವ್..ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆ ವ್ಯಕ್ತಿ ಮೋಸ್ಟ್ಲಿ ಬಲಗಡೆ ಎದ್ದಿದ್ದ ಅನಿಸುತ್ತೆ, ಆದಕ್ಕೆ ಜವರಾಯ ವಾಪಸಾಗಿದ್ದಾನೆ. ರಸ್ತೆ ಬದಿ ನಿಂತಿದ್ದ ವ್ಯಕ್ತಿ ಮೇಲೆ ಭಾರೀ ವಾಹನವೊಂದು ವೇಗವಾಗಿ ಬಂದಿದೆ. ಅದೃಷ್ಟವಶಾತ್ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೇಗವಾಗಿ ಬಂದ ವಾಹನ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಇತ್ತ ಗೋಡೆ, ಅತ್ತ ವಾಹನ ಎರಡರ ಮಧ್ಯೆ ವ್ಯಕ್ತಿ ಸಿಕ್ಕಿಹಾಕಿಕೊಂಡಿದ್ದಾನೆ.

ಘಟನೆ ಬಳಿಕ ವ್ಯಕ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರುವುದು ಬ್ರೆಜಿಲ್‌ನಲ್ಲಿ. 56 ಸೆಕೆಂಡ್ ಗಳ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದವರೆಲ್ಲರೂ ಈತನ ನಸೀಬು ಚೆನ್ನಾಗಿತ್ತು, ಆಯಸ್ಸು ಗಟ್ಟಿಯಾಗಿದೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!