ಆಯಸ್ಸು ಗಟ್ಟಿ ಇದ್ರೆ ಈ ರೀತಿಯೂ ಪ್ರಾಣ ಉಳಿಯುತ್ತೆ ನೋಡಿ: ವೈರಲ್‌ ವಿಡಿಯೊ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆಯಸ್ಸು ಗಟ್ಟಿ ಇದ್ರೆ ಬಂಡೆ ಎತ್ತಿ ಹಾಕಿದರೂ ಸಾಯಲ್ಲ ಅನ್ನೋದಕ್ಕೆ ಈ ಘಟನೆ ಉದಾಹರಣೆಯಾಗಿದೆ.
ಒಬ್ಬ ಪೈಲಟ್ ಮಾತ್ರವೇ ಇದ್ದ ವಿಮಾನ ರೈಲಿನ ಹಳಿಗಳ ಮೇಲೆ ಬಂದು ಬಿತ್ತು. ಅದೃಷ್ಟವಶಾತ್‌ ಪೈಲಟ್‌ ಪ್ರಾಣಾಪಾಯದಿಂದ ಪಾರಾದ. ಆದರೆ ಹಳಿಯ ಮೇಲೆ ಬಿದ್ದಿದ್ದ ವಿಮಾನದಲ್ಲಿದ್ದ ಆತನನ್ನು ರಕ್ಷಿಸಿ ಪಕ್ಕಕ್ಕೆ ಬಂದ ಮರು ಕ್ಷಣ ಅಲ್ಲಿ ನಡೆದಿದ್ದು ಮತ್ತೊಂದು ಆಘಾತ. ರೈಲಿನ ಹಳಿಯ ಮೇಲೆ ಪತನವಾದ ವಿಮಾನವನ್ನು ವೇಗವಾಗಿ ಬಂದ ರೈಲೊಂದು ಛಿದ್ರಗೊಳಿಸಿದೆ. ಎರಡು ಸಲ ಆತ ತನ್ನ ಆಯಸ್ಸನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದಾನೆ.
ಈ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್‌ ಏಂಜಲೀಸ್‌ ನ ಪಕೊಯಿಮಾದ ಬಳಿ ನಡೆದಿದೆ.

ನಡೆದದ್ದೇನು?:
ಸೆಸ್ನಾ 172 ಎಂಬ ಸಣ್ಣ ವಿಮಾನ ಸ್ಯಾನ್‌ ಫರ್ನಾಂಡೋ ರಸ್ತೆ ಮತ್ತು ಒಸ್ಬೋರ್ನ್‌ ಸ್ಟ್ರೀಟ್‌ ಸಂಪರ್ಕಿಸುವಲ್ಲಿ ಪತನಗೊಂಡಿದೆ. ವೇಗವಾಗಿ ಮೆಟ್ರೋಲಿಂಕ್‌ ರೈಲಿನ ಕಡೆಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ರೈಲು ಹಳಿಯ ಮೇಲೆ ಬಿದ್ದ ವಿಮಾನದಿಂದ ಪೈಲಟ್‌ ಅನ್ನು ರಕ್ಷಿಸಿ ಪಕ್ಕಕ್ಕೆ ಎಳೆದಿದ್ದಾರೆ.
ರೈಲಿನ ಹಳಿಯಿಂದ ಪೈಲೆಟ್‌ ಅನ್ನು ರಕ್ಷಿಸಿ ನಾಲ್ಕು ಹೆಜ್ಜೆ ಇಡುತ್ತಿದ್ದಂತೆ ವೇಗವಾಗಿ ಬಂದ ರೈಲು, ಪತನಗೊಂಡ ವಿಮಾನಕ್ಕೆ ಅಪ್ಪಳಿಸಿ ಛಿದ್ರಗೊಳಿಸಿದೆ. ಇದಕ್ಕೆ ಅನ್ನೋದು ಅಲ್ವ ಅದೃಷ್ಟ ಅಂತ. ಕೆಲವೇ ಕೆಲವು ಸೆಕೆಂಡುಗಳು ತಡವಾಗಿದ್ದರೂ ಅಧಿಕಾರಿಗಳ ಸಮೇತ ಎಲ್ಲರೂ ಛಿತ್ರಗೊಳ್ಳುತ್ತಿದ್ದರು.
ಈ ಅಪಘಾತದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಅಧಿಕಾರಿಗಳ ಧೈರ್ಯಕ್ಕೆ ನೆಟ್ಟಿಗರು ಸಲಾಮ್‌ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!