ವಿಮಾನದಿಂದ ಹಾರಿದ ಬೆಂಕಿಯ ಕಿಡಿ: ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆದ ದೃಶ್ಯ ಸೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗೆ ವಿಮಾನಗಳು ಪದೇ ಪದೇ ಅಪಘಾತಕ್ಕೀಡಾಗುತ್ತಿವೆ. ಆದರೆ, ಮೊದಲೇ ಪತ್ತೆ ಹಚ್ಚಿ ಅಪಾಯದ ಎಚ್ಚರಿಕೆ ನೀಡುವುದರಿಂದ ಪ್ರಾಣಿಹಾನಿ ಘಟನೆಗಳು ಕಡಿಮೆಯಾಗಿವೆ. ಮೊನ್ನೆ ಯುನೈಟೆಡ್ ಏರ್‌ಲೈನ್ಸ್‌ಗೆ ಸೇರಿದ ಬೋಯಿಂಗ್ 777 ವಿಮಾನವೂ ಕೂಡಾ ಅಪಘಾತಕ್ಕೀಡಾಗಿತ್ತು.

ಕಳೆದ ಬುಧವಾರ ಸಂಜೆ ನ್ಯೂಯಾರ್ಕ್ ವಿಮಾನ ನಿಲ್ದಾಣದಿಂದ ಸಾವೊ ಪಾಲೊಗೆ ವಿಮಾನವು ಹೊರಟಿತ್ತು. ಆದರೆ, ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ಸಣ್ಣಪುಟ್ಟ ತೊಂದರೆ ಉಂಟಾಗಿದೆ. ವಿಮಾನದಿಂದ ಬೆಂಕಿ ಕಿಡಿ ಕೆಳಕ್ಕೆ ಹಾರಿದೆ. ಆದರೂ ವಿಮಾನವು ಒಂದೂವರೆ ಗಂಟೆಗಳ ಕಾಲ ಕ್ರಮಿಸಿ ಅಟ್ಲಾಂಟಿಕ್ ಸಾಗರದ ಮೂಲಕ ಸುಮಾರು 90 ನಿಮಿಷಗಳ ಬಳಿಕ ಅಪಾಯವನ್ನು ಅರಿತು ನ್ಯೂಯಾರ್ಕ್‌ನಲ್ಲಿ ಲ್ಯಾಂಡ್‌ ಆಗಿದೆ. ಬೆಂಕಿ ಕಿಡಿ ನೆಲಕ್ಕೆ ಬೀಳುತ್ತಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!