ರಾಜಧಾನಿಯಲ್ಲಿ ವಾಟರ್ ಟ್ಯಾಂಕರ್ ಮಾಫಿಯಾ ‘ದಿ ಎಂಡ್’ ಹೊಸ ದರ ನಿಗದಿ ಮಾಡಿದ ಜಿಲ್ಲಾಡಳಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಜನ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.

ಸಂದರ್ಭದ ಲಾಭ ಪಡೆದ ಕೆಲ ಟ್ಯಾಂಕರ್‌ಗಳು ತಮ್ಮಿಷ್ಟದಷ್ಟು ಹಣವನ್ನು ಜನರಿಂದ ವಸೂಲಿ ಮಾಡುತ್ತಿದ್ದರು. ಇದೀಗ ಟ್ಯಾಂಕರ್ ಮಾಫಿಯಾಗೆ ಬ್ರೇಕ್ ಬಿದ್ದಿದೆ.

ಇದೀಗ ಜಿಲ್ಲಾಡಳಿತ ಹೊಸ ದರವನ್ನು ನಿಗದಿ ಮಾಡಿದೆ. ಜೊತೆಗೆ ಟ್ಯಾಂಕರ್‌ಗಳ ನೋಂದಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.

6 ಸಾವಿರ ಲೀಟರ್‌ ಸಾಮರ್ಥ್ಯದ ವಾಟರ್‌ ಟ್ಯಾಂಕರ್‌ ಅನ್ನು ಬಾಡಿಗೆ ಪಡೆದರೆ ಪ್ರತಿ ದಿನಕ್ಕೆ 5,200 ರೂಪಾಯಿಗಳನ್ನು ಪಾವತಿಸಬೇಕಾಗಿದ್ದು, 12 ಸಾವಿರ ಲೀಟರ್‌ ಸಾಮರ್ಥ್ಯದ ವಾಟರ್‌ ಟ್ಯಾಂಕರ್‌ ಬಾಡಿಗೆ ಪಡೆದರೆ ಪ್ರತಿ ದಿನಕ್ಕೆ 7,100 ರೂಪಾಯಿಗಳನ್ನು ಪಾವತಿಸಬೇಕಿದೆ.

ಇನ್ನು, 6 ಸಾವಿರ ಲೀಟರ್‌ ನೀರನ್ನು ತೆಗೆದುಕೊಂಡರೆ 600 ರಿಂದ 750 ರೂ. ಇದೆ. 8 ಸಾವಿರ ಲೀಟರ್‌ ನೀರಿಗೆ 700 ರಿಂದ 850 ರೂ. ನಿಗದಿಪಡಿಸಲಾಗಿದೆ. 12 ಸಾವಿರ ಲೀಟರ್‌ ನೀರಿಗೆ 1,000 ದಿಂದ 1,200 ರೂ. ದರವನ್ನು ನಿಗದಿಪಡಿಸಲಾಗಿದೆ. ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 5 ಕಿ.ಮೀಟರ್ ಗೆ 510 ರೂ ಮತ್ತು 10 ಕಿಲೋ ಮೀಟರ್ ದೂರ ಹೋದರೆ 650 ರೂ. ದರ ನಿಗದಿ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!