ವಾಟರ್..ವಾಟರ್..ಡ್ರಿಂಕ್ಸ್ ಬಾಯ್ ಯಾಗಿ ಮಕ್ಕಳಂತೆ ಓಡೋಡಿ ಬಂದ ಕೊಹ್ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ (Virat kohli) ಬಾಂಗ್ಲಾದೇಶ ವಿರುದ್ಧದ ಏಷ್ಯಾ ಕಪ್​ ಸೂಪರ್​ 4 ಪಂದ್ಯದಿಂದ ಹೊರಗಿದ್ದು,ಆದ್ರೂ ಫುಲ್ ಸುದ್ದಿಯಲ್ಲಿದ್ದಾರೆ.

ಹೌದು, ವಿರಾಟ್​ ಕೊಹ್ಲಿ ಅಂದ್ರೆ ಮೈದಾನ ಇರಲಿ ಅಥವಾ ಹೊರಗೆ ಇರಲಿ ಸದಾ ಆಕ್ಟಿವ್ ಆಗಿಯೇ ಇರುತ್ತಾರೆ. ಇಂದು ಬಾಂಗ್ಲಾ ವಿರುದ್ಧ ಪಂದ್ಯದಲ್ಲೂ ವಾಟರ್​​ಬಾಯ್​ ಆಗಿ ಕಾರ್ಯನಿರ್ವಹಿಸಿದ್ದಾರೆ.

ಅಂದ ಹಾಗೆ ವಿರಾಟ್​ ಕೊಹ್ಲಿ ವಾಟರ್​ ಬಾಯ್​ ಆಗಿ ಕಾರ್ಯ ನಿರ್ವಹಿಸುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ವಾಟರ್​ಬಾಯ್​ ಪಾತ್ರ ನಿರ್ವಹಿಸಿದ್ದರು. ಆದರೆ, ಈ ಬಾರಿ ಅವರು ಗಮನ ಸೆಳೆದಿರುವುದು ತಮ್ಮ ವಿನೋದದ ಓಟದ ಕಾರಣಕ್ಕೆ.

ಇದೀಗ ಈ ಓಟ ಇಂಟರ್ನೆಟ್​ನಲ್ಲಿ ಟ್ರೆಂಡ್ ಆಗಿದೆ. ಒಂದು ಓವರ್​ ಮುಕ್ತಾಯಗೊಂಡ ತಕ್ಷಣ ವಾಟರ್​ ಬಾಯ್​​ಗಳು ನೀರು ತೆಗೆದುಕೊಂಡು ಮೈದಾನದಲ್ಲಿರುವ ಆಟಗಾರರಿಗೆ ತಲುಪಿಸಬೇಕು. ಕೆಲವೊಂದು ಬಾರಿ ಕೋಚ್​ಗಳ ಹೇಳುವ ಸಂದೇಶವನ್ನೂ ರವಾನೆ ಮಾಡಬೇಕಾಗುತ್ತದೆ. ಅಂತೆಯೇ ವಿರಾಟ್​ ಕೊಹ್ಲಿ ಬಾಂಗ್ಲಾ ವಿರುದ್ಧದ ಹಣಾಹಣಿಯಲ್ಲಿ ಈ ಕೆಲಸ ಮಾಡಿದ್ದರು.ಈ ಬಾರಿ ವಾಟರ್​ ಬಾಯ್​ ಅಗಿ ಓಡುವ ಮೂಲಕವೂ ತಮಾಷೆ ಸೃಷ್ಟಿಸಿದ್ದಾರೆ.

ಓವರ್ ಒಂದು ಮುಗಿದ ತಕ್ಷಣ ವಾಟರ್ ಕ್ಯಾನ್ ಹಿಡಿದುಕೊಂಡು ಹೊರಟ ಅವರು ಮಕ್ಕಳಂತೆ ಓಡಲು ಆರಂಭಿಸುತ್ತಾರೆ. ಅವರನ್ನು ಹಿಂಬಾಲಿಸುತ್ತಿದ್ದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ನೋಡಿ ನಗುತ್ತಾರೆ. ಸ್ವಲ್ಪ ಹೊತ್ತು ಸರಿಯಾಗಿ ಓಡಿದ ಅವರು ಬಳಿಕ ಅದೇ ರೀತಿ ತಮಾಷೆಯಾಗಿ ಓಡಲು ಆರಂಭಿಸುತ್ತಾರೆ. ಅವರ ಈ ವರ್ತನೆಗಳು ಹಲವು ಪ್ರೇಕ್ಷರ ಮೊಬೈಲ್​ ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. ಈ ದೃಶ್ಯಾವಳಿಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!