ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವರ ನಾಡು ಖ್ಯಾತಿಯ ಕೇರಳದ ವಯನಾಡಿನಲ್ಲಿ ಜುಲೈ 30 ರಂದು ಸಂಭವಿಸಿದ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ವಶಕ್ಕೆ ಪಡೆಯಲಾದ 401 ಮೃತದೇಹಗಳು ಮತ್ತು ಭಾಗಗಳ ಡಿಎನ್‌ಎ ಪರೀಕ್ಷೆ ಮಂಗಳವಾರ ಪೂರ್ಣಗೊಂಡಿದೆ.
ಸೇನೆ, ವಿಶೇಷ ಕಾರ್ಯಾಚರಣೆ ಗುಂಪು, ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಇಲಾಖೆ ಸೇರಿದಂತೆ ಹಲವು ಸ್ವಯಂಸೇವಕರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ 121 ಪುರುಷರು ಮತ್ತು 127 ಮಹಿಳೆಯರು ಸೇರಿದಂತೆ 248 ಜನರಿಗೆ ಸೇರಿದ 349 ದೇಹದ ಭಾಗಗಳು ಪತ್ತೆಯಾಗಿವೆ.
ದೇಹದ 52 ಭಾಗಗಳು ಕೊಳೆತಿರುವುದರಿಂದ ಹೆಚ್ಚಿನ ಪರೀಕ್ಷೆಗಳ ಅಗತ್ಯವಿದೆ ಎಂದು ಕಂದಾಯ ಸಚಿವ ಕೆ ರಾಜನ್ ಹೇಳಿದ್ದಾರೆ.