ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಸರಕಾರ ಮಹಿಳೆಯರಿಗೆ ರಕ್ಷಣೆ ನೀಡಲು ಮತ್ತು ಮಹಿಳೆಯರ ವಿರುದ್ಧದ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಬದ್ಧವಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಹೆಣ್ಣು ಮಕ್ಕಳ ರಕ್ಷಣೆಗೆ ನಾವು ಬದ್ಧ. ಮಹಿಳೆಯರ ವಿರುದ್ಧ ಕೃತ್ಯ ಎಸಗುವ ತಪ್ಪಿತಸ್ಥರ ಕೈ ಮತ್ತು ಕಾಲುಗಳನ್ನು ಕತ್ತರಿಸುತ್ತೇವೆ’ ಎಂದು ಎಚ್ಚರಿಸಿದರು.
ಅದೇ ರೀತಿ ನಮ್ಮ ಸರಕಾರವು ಮಾಫಿಯಾವನ್ನು ನಿರ್ನಾಮ ಮಾಡಲಿದೆ ಎಂದರು.
ಇದೇ ಸಂದರ್ಭ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಶಿವಪಾಲ್ ಯಾದವ್ ಅವರನ್ನು ‘ನರಭಕ್ಷಕ ತೋಳ’ಗಳಿಗೆ ಹೋಲಿಕೆ ಮಾಡಿದರು. ‘ಮಾಫಿಯಾ ಎದುರು ತಲೆಬಾಗುವವರು ಬುಲ್ಡೋಜರ್‌ಗಳನ್ನು ಬಳಸುವುದಿಲ್ಲ’ ಎಂದು ಅಖಿಲೇಶ್ ಅವರ ಟೀಕೆಗೆ ತಿರುಗೇಟು ನೀಡಿದರು.