Friday, June 9, 2023

Latest Posts

ಚುನಾವಣೆಗೆ ನಾವ್ ರೆಡಿ, ಭ್ರಷ್ಟ ಸರ್ಕಾರ ಕಿತ್ತೆಸೆಯುತ್ತೇವೆ : ಡಿ.ಕೆ.ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಚುನಾವಣಾ ಆಯೋಗ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆಲ್ಲುವ ಜೋಶ್‌ನಲ್ಲಿದ್ದಾರೆ.

ಚುನಾವಣೆಗೆ ನಾವು ರೆಡಿ, ಈ ಸರ್ಕಾರವನ್ನು ಕಿತ್ತೆಸೆಯೋದೆ ನಮ್ಮ ಗುರಿ. ಯಾಕಂದ್ರೆ ಇದು ಭ್ರಷ್ಟ ಸರ್ಕಾರ, ಇಷ್ಟು ಭ್ರಷ್ಟ ಸರ್ಕಾರವನ್ನು ನಾನು ಹಿಂದೆಂದೂ ನೋಡೇ ಇಲ್ಲ ಎಂದಿದ್ದಾರೆ.

ಈ ಬಾರಿ ಅಭಿವೃದ್ಧಿ ಆಧಾರಿತ ಕಾಂಗ್ರೆಸ್ ಆಡಳಿತಕ್ಕೆ ಬರುತ್ತದೆ. ಈಗಿರುವ ಸರ್ಕಾರದಲ್ಲಿ ಭ್ರಷ್ಟಾಚಾರ ಉತ್ತುಂಗದಲ್ಲಿದ್ದು, ಪ್ರಧಾನಿ ಮೋದಿ ಇದಕ್ಕೆ ಪ್ರೋತ್ಸಾಹ ಕೊಟ್ಟಿದ್ದಾರೆ. ತಮ್ಮ ಪಕ್ಷದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಗೊತ್ತಿದ್ದೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!