September 24, 2026
Thursday, September 24, 2026
spot_img

‘ನಮಗೆ ಇಂತಹ ಕಳಪೆ ಚಪ್ಪಲಿ ಬೇಡ’: ಸರ್ಕಾರದ ಉಚಿತ ಪಾದರಕ್ಷೆ ತಿರಸ್ಕರಿಸಿದ ವಿದ್ಯಾರ್ಥಿಗಳು

ಹೊಸದಿಗಂತ ವರದಿ ಮುಂಡಗೋಡ:

ತಾಲೂಕಿನ ಬೆಡಸಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ವಿತರಿಸಲಾಗಿರುವ ಪಾದರಕ್ಷೆಗಳ ಗುಣಮಟ್ಟದ ಕುರಿತು ವಿದ್ಯಾರ್ಥಿಗಳು, ಪಾಲಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಕೆಲ ವಿದ್ಯಾರ್ಥಿಗಳು ಅವುಗಳನ್ನು ಧರಿಸಲು ನಿರಾಕರಿಸಿದ ಘಟನೆ ನಡೆದಿದೆ.

ಇದನ್ನು ಶಾಲಾ ಆವರಣದಲ್ಲಿ ಚರ್ಚೆ ನಡೆಸಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.  ಸರ್ಕಾರದ ವತಿಯಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಪಾದರಕ್ಷೆಗಳನ್ನು ವಿತರಿಸಲಾಗಿದ್ದು, ಅವು ಮಕ್ಕಳ ಬಳಕೆಗೆ ಸೂಕ್ತವಾಗಿಲ್ಲ ಎಂಬುದು ಪಾಲಕರು ಹಾಗೂ ಎಸ್‌ಡಿಎಂಸಿ ಸದಸ್ಯರ ಆರೋಪವಾಗಿದೆ. ಪಾದರಕ್ಷೆಗಳ ಗುಣಮಟ್ಟ, ಗಾತ್ರ ಹಾಗೂ ತಯಾರಿಕೆಯ ಬಗ್ಗೆ ಸಮರ್ಪಕ ಪರಿಶೀಲನೆ ನಡೆಸಿ ನಂತರವೇ ಮಕ್ಕಳಿಗೆ ವಿತರಿಸಬೇಕಾಗಿತ್ತು. ಆದರೆ ವಿತರಿಸಿರುವ ಪಾದರಕ್ಷೆಗಳನ್ನು ನೋಡಿದಾಗ ಗುಣಮಟ್ಟದ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:

ಲೋಕಾಯುಕ್ತರಿಗೆ ದೂರು:

ಪಾದರಕ್ಷೆಗಳ ಗುಣಮಟ್ಟದ ಕುರಿತು ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಸಂಗ್ರಹಿಸಿ, ಈ ವಿಚಾರವನ್ನು ಲೋಕಾಯುಕ್ತರ ಗಮನಕ್ಕೂ ತರಲು ದೂರು ಸಲ್ಲಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಪಾಲಕರು ತಿಳಿಸಿದ್ದಾರೆ.

Must Read