ಆಧುನಿಕ ಅಭಿಮನ್ಯುಗಳಾಗಿ ಚಕ್ರವ್ಯೂಹ ಭೇದಿಸಿದ್ದೇವೆ: ದೇವೇಂದ್ರ ಫಡ್ನವೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಹಿಂದೆ ಮಹಾರಾಷ್ಟ್ರವು ದೃಢವಾಗಿ ನಿಂತಿದೆ ಎಂದು ಈ ಚುನಾವಣಾ ಫಲಿತಾಂಶ ತೋರಿಸಿದೆ. ಕಳೆದ ಎರಡು ವರ್ಷದಲ್ಲಿ ಪಕ್ಷ ಸಂಘಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಉಸ್ತುವಾರಿ ಭೂಪೇಂದ್ರ ಯಾದವ್ ಮತ್ತು ಹಿರಿಯ ನಾಯಕರಿಗೆ ಮತ್ತು ವಿಶೇಷವಾಗಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವಂಕುಲೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಅಭೂತಪೂರ್ವ ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ವಿರೋಧ ಪಕ್ಷಗಳು ಹರಡುತ್ತಿದ್ದ ದಾರಿ ತಪ್ಪಿಸುವಂತಹ ಪ್ರಚಾರವನ್ನು ಮಹಾರಾಷ್ಟ್ರದ ಜನರು ತಿರಸ್ಕರಿಸಿದ್ದಾರೆ. ನಾನು ಮಹಾರಾಷ್ಟ್ರದ ಜನತೆಗೆ ಧನ್ಯವಾದ ಹೇಳುತ್ತೇನೆ. ಆಧುನಿಕ ಅಭಿಮನ್ಯುಗಳಾದ ನಾವು, ಕೊನೆಗೂ ಚಕ್ರವ್ಯೂಹವನ್ನು ಭೇದಿಸಿದ್ದೇವೆ. ಇಡೀ ಮಹಾರಾಷ್ಟ್ರ ಪ್ರಧಾನಿ ಮೋದಿಯವರ ಹಿಂದೆ ಇದೆ. ಮೋದಿ ನೀಡಿದ’ಏಕ್​ ಹೈ ತೋ ಸೇಫ್​ ಹೈ’ ಎಂಬ ಘೋಷಣೆಯನ್ನು ಮಹಾರಾಷ್ಟ್ರದ ಎಲ್ಲಾ ಸಮುದಾಯಗಳ ಜನರು ಸ್ವಾಗತಿಸಿದ್ದಾರೆ. ನಮಗೆ ಆಶೀರ್ವದಿಸಿದ ನಮ್ಮ ಪ್ರೀತಿಯ ಸಹೋದರಿಯರಿಗೆ (ಲಾಡ್ಲಿ ಬೆಹನಾ ಯೋಜನೆ ಫಲಾನುಭವಿಗಳು)ಧನ್ಯವಾದಗಳು ಎಂದು ಹೇಳಿದರು.

ಪಕ್ಷಗಳು ಗೆದ್ದ ಸ್ಥಾನಗಳ ಆಧಾರದ ಮೇಲೆ ಮುಖ್ಯಮಂತ್ರಿ ಹುದ್ದೆಯನ್ನು ನಿರ್ಧರಿಸಲಾಗುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷರು ಒಟ್ಟಾಗಿ ಸಿಎಂ ಆಯ್ಕೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!