ʼಟೀಂ ಇಂಡಿಯಾ 2 ವಿಶ್ವಕಪ್‌ ಸೋತಿದ್ದಕ್ಕೆ ಆತನೇ ಕಾರಣʼ… ಹಾರ್ದಿಕ್‌ ಪಾಂಡ್ಯಾ ಕಡೆಗೆ ಬೊಟ್ಟುಮಾಡಿದ ರವಿಶಾಸ್ತ್ರೀ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
2017ರಲ್ಲಿ ಅನಿಲ್ ಕುಂಬ್ಳೆ ಅವರಿಂದ ಕೋಚಿಂಗ್‌ ಜವಾಬ್ದಾರಿ ವಹಿಸಿಕೊಂಡ ರವಿಶಾಸ್ತ್ರೀ ಭಾರತ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದರು. ಅದಾಗ್ಯೂ, ಅವರ ತರಬೇತಿಯಡಿ ಅವಧಿಯಲ್ಲಿ ಭಾರತಕ್ಕೆ ಯಾವುದೇ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಕಳೆದ ವರ್ಷ ಯುಎಇನಲ್ಲಿ ನಡೆದ T20 ವಿಶ್ವಕಪ್ ಬಳಿಕ ಕೋಚ್‌ ಹುದ್ದೆಯಿಂದ ನಿರ್ಗಮಿಸಿದ ಶಾಸ್ತ್ರೀಗೆ ಐಸಿಸಿ ಟ್ರೋಫಿ ಗೆಲ್ಲದ ಕೊರಗು ಈಗಲೂ ಕಾಡುತ್ತಿರುವಂತೆ ಕಾಣುತ್ತಿದೆ. ಈ ಬಗ್ಗೆ ಆತ್ಮವಲೋಕನ ಮಾಡಿಕೊಂಡಿರುವ ರವಿಶಾಸ್ತ್ರೀ, ತಮ್ಮ ಅವಧಿಯಲ್ಲಿ ಭಾರತ ವಿಶ್ವಕಪ್‌ ಸೋತಿದ್ದಕ್ಕೆ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದಾರೆ!.
ರವಿಶಾಸ್ತ್ರಿ ಪ್ರಕಾರ.. ಭಾರತ ಎರಡು ವಿಶ್ವಕಪ್ ಟ್ರೋಫಿಗಳನ್ನು ಕಳೆದುಕೊಳ್ಳಲು ಪ್ರಧಾನ ಕಾರಣ ಹಾರ್ದಿಕ್‌ ಪಾಂಡ್ಯಾ. “ನಾನು ಯಾವಾಗಲೂ ಅಗ್ರ ಆರು ಆಟಗಾರರಲ್ಲಿ ಬೌಲಿಂಗ್ ಮಾಡುವ ಒಬ್ಬ ಆಟಗಾರನನ್ನು ಬಯಸುತ್ತೇನೆ. ವಿಶ್ವಕಪ್‌ನ ಪ್ರಮುಖ ಹಂತದಲ್ಲಿ ಹಾರ್ದಿಕ್ ಗಾಯಗೊಂಡಿದ್ದರಿಂದ ನಮಗೆ ದೊಡ್ಡ ಸಮಸ್ಯೆಯಾಯಿತು. ಮತ್ತು ಇದು ಟೀಂ ಇಂಡಿಯಾ  ಸಮತೋಲನಕ್ಕೆ ಹೊಡೆತ ನೀಡಿತು. ಆತನಿಂದಾಗಿಯೇ ಭಾರತ ಎರಡು ವಿಶ್ವಕಪ್‌ಗಳನ್ನು ಕಳೆದುಕೊಳ್ಳಬೇಕಾಯಿತು. ಏಕೆಂದರೆ ನಮ್ಮಲ್ಲಿ ಅಗತ್ಯಬಿದ್ದಾಗ ಬೌಲಿಂಗ್ ಮಾಡಬಲ್ಲ ಆಟಗಾರ ಯಾರೂ ಇರಲಿಲ್ಲ. ‘ಹಾರ್ದಿಕ್‌ ಗೆ ಪರ್ಯಾಯವಾಗಿ ಬೌಲಿಂಗ್‌ ಆಲ್ರೌಂಡರ್‌ ಒಬ್ಬನನ್ನು ಹುಡುಕಿ’ ಎಂದು ಆಯ್ಕೆದಾರರಿಗೆ ಹೇಳಿದ್ದೆವು. ಆದರೆ ಅವರು ಹೆಚ್ಚಿನ ಗಮನವನ್ನೇ ಹರಿಸಿರಲಿಲ್ಲ ಎಂದು ಶಾಸ್ತ್ರಿ ಬೇಸರ ವ್ಯಕ್ತಪಡಿಸಿದರು.
ಕೊಹ್ಲಿ-ಶಾಸ್ತ್ರಿ ಜೋಡಿಯ ನಾಯಕತ್ವದಡಿ ಭಾರತವು 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಮತ್ತು 2019ರ ಇಂಗ್ಲೆಂಡ್ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿತು. ಆದರೆ ಕಳೆದ ವರ್ಷ ನಡೆದಿದ್ದ  ಟಿ20 ವಿಶ್ವಕಪ್‌ನಲ್ಲಿ ಭಾರತದ ಪ್ರದರ್ಶನ ಆಘಾತಕಾರಿಯಾಗಿತ್ತು. ಗ್ರೂಪ್ ಹಂತದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋತು ಭಾರತ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಯುಎಇಯಲ್ಲಿ ವಿಶ್ವಕಪ್ ನ ಬೌಲೀಗ್‌ ಮಾಡುವ ಸಾಮರ್ಥ್ಯವನ್ನೇ ಹೊಂದಿರಲಿಲ್ಲ. ಅವರು ಸಂಪೂರ್ಣವಾಗಿ ಬ್ಯಾಟಿಂಗ್ ಫಿನಿಶರ್ ಆಗಿ ಕೆಳ ಕ್ರಮಾಂಕದಲ್ಲಿ ಆಡಿದರು. ಇಂದು ತಂಡದ ಸಂಯೋಜನೆಯ ಮೇಲೆ ಹೊಡೆತಬಿದ್ದಿತ್ತು. ಇದೇ ವಿಚಾರವಾಗಿ ಮಾತನಾಡಿರುವ ಶಾಸ್ತ್ರೀ ಹಾರ್ದಿಕ್‌ ವಿಚಾರವಾಗಿ ಬೇಸರ ತೋಡಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!