ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ ಚುನಾವಣೆಯಲ್ಲಿ ಇಂಡಿಯ ಬ್ಲಾಕ್ 30 ಸ್ಥಾನಗಳನ್ನು ಗೆದ್ದಿದೆ, ಎನ್‌ಡಿಎ 9 ಸ್ಥಾನಗಳನ್ನು ಪಡೆದುಕೊಂಡಿದೆ. ಆರಂಭಿಕ ಸುತ್ತಿನಲ್ಲಿ ಹಿಂದುಳಿದಿದ್ದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್ ಇದೀಗ ಭಾರೀ ಗೆಲುವು ಕಂಡಿದೆ. ಪ್ರಸ್ತುತ 81 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಇಂಡಿಯ ಬ್ಲಾಕ್ ಮುಂದಿದೆ. ಎನ್‌ಡಿಎ ಇದೀಗ 26 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಈ ಖುಷಿಯನ್ನು ಹಂಚಿಕೊಂಡ ಸಿಎಂ ಹೇಮಂತ್ ಸೊರೆನ್ ಜಾರ್ಖಂಡ್‌ನ ಪ್ರಜಾಪ್ರಭುತ್ವದ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾಗಿದ್ದೇವೆ ಎಂದು ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಾವು ಜಾರ್ಖಂಡ್‌ನಲ್ಲಿ ಪ್ರಜಾಪ್ರಭುತ್ವದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೇವೆ. ಚುನಾವಣಾ ಫಲಿತಾಂಶದ ನಂತರ ನಾವು ನಮ್ಮ ಕಾರ್ಯತಂತ್ರವನ್ನು ಅಂತಿಮಗೊಳಿಸುತ್ತೇವೆ. ಈ ಅದ್ಭುತ ಪ್ರದರ್ಶನಕ್ಕಾಗಿ ನಾನು ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜಾರ್ಖಂಡ್ ‘ಅಬುವಾ ರಾಜ್, ಅಬುವಾ ಸರ್ಕಾರ್’ (ಸ್ವಂತ ರಾಜ್ಯ, ಸ್ವಂತ ಸರ್ಕಾರ) ಸ್ಕ್ರಿಪ್ಟ್ ಮಾಡಲು ಸಿದ್ಧವಾಗಿದೆ ಎಂದರು.