ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ನ. 24ರಂದು ಶ್ರೀ ಅನುಗ್ರಹ ಸಂಗೀತ ಮಹಾ ವಿದ್ಯಾಲಯ ಬೆಂಗಳೂರಿನ ಬನಶಂಕರಿ ಒಂದನೇ ಹಂತದ (ಪಿಇಎಸ್ ಪದವಿ ಕಾಲೇಜು ಪಕ್ಕದ) ಸ್ವಾಮಿ ವಿವೇಕಾನಂದ ಶಾಲೆ ಸಭಾಂಗಣದಲ್ಲಿಶ್ರೀ ಮುತ್ತುಸ್ವಾಮಿ ದೀಕ್ಷಿತರ ಆರಾಧನಾ ಮಹೋತ್ಸವ ಮತ್ತು ಕನಕದಾಸರ ಜಯಂತಿ ನಿಮಿತ್ತ ವಿಶೇಷ ಗಾಯನ- ವಾದನ ಕಚೇರಿ ನಡೆಯಲಿದೆ.
ಮಧ್ಯಾಹ್ನ 3:30ಕ್ಕೆ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ಪೋಷಕರು ಮತ್ತು ಕಸೂತಿ ಕಲಾವಿದೆ ಸುಧಾಮಣಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ವಿದ್ವಾಂಸ ಮತ್ತು ಪ್ರಖ್ಯಾತ ಗಾಯಕ ವಿದ್ವಾನ್ ಜೆ. ಎಸ್ . ಶ್ರೀಕಂಠ ಭಟ್ ಅಧ್ಯಕ್ಷತೆ ವಹಿಸುವರು.
ಬಳಿಕ ಮುತ್ತು ಸ್ವಾಮಿ ದೀಕ್ಷಿತರ ನೊಟ್ಟುಸ್ವರ ಗೋಷ್ಠಿ ಗಾಯನ ನಡೆಯಲಿದೆ. ಈ ಸಂದರ್ಭ 15 ವೀಣಾ ಕಲಾವಿದರಿಂದ ಏಕಾದಶ ವೀಣಾ ವಾದನ, ವಯೋಲಿನ್ ನಲ್ಲಿ ಚೈತ್ರಾ ಶ್ರೀಧರ್ ನೊಟ್ಟುಸ್ವರ ವಾದನ ಮತ್ತು ವಿದ್ಯಾಲಯದ ಕಿರಿಯ ವಿದ್ಯಾರ್ಥಿಗಳಿಂದ ನೊಟ್ಟುಸ್ವರ ಗಾಯನ ನಡೆಯಲಿದೆ. ಜೊತೆಗೆ ದಾಸರಪದ ಕಲಿಕಾ ಶಿಬಿರಾರ್ಥಿಗಳಿಂದ ಮತ್ತು ವಿದ್ಯಾಲಯದ ವಿದ್ಯಾರ್ಥಿಗಳಿಂದ ಕನಕದಾಸ ಕೃತಿಗಳ ಗಾಯನವಿದೆ.
ಸಂಜೆ 7ಕ್ಕೆ ವಿದ್ವಾನ್ ಸುಬ್ಬಕೃಷ್ಣ ಮತ್ತು ವಿದ್ವಾನ್ ನಿರಂಜನ ಯಡಿಯಾಳ ಅವರು ಶ್ರೀ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳನ್ನು ಆಧರಿಸಿ ವಿಶೇಷ ಸಂಗೀತ ಕಚೇರಿ ಪ್ರಸ್ತುತಪಡಿಸಲಿದ್ದಾರೆ .
ರಾತ್ರಿ 7:30ಕ್ಕೆ ವಿದ್ವಾಂಸ ಶಶಾಂಕ ಚಿನ್ಯ ಅವರಿಂದ ಕೊಳಲು ವಾದನ , ಪಕ್ಕವಾದ್ಯ : ವಿದ್ವಾಂಸರಾದ ಅಭಯ್ ಸಂಪಿಗೆತ್ತಾಯ ( ಪಿಟೀಲು), ಶಿವಮೊಗ್ಗ ನಿಖಿಲ್ ಕುಮಾರ್ (ಮೃದಂಗ ), ವಿದುಷಿಯರಾದ ಬಿ. ಜಿ . ರಮಾ, ದೀಪ್ತಿ ಮತ್ತು ಧನ್ಯಶ್ರೀ ( ವೀಣೆ ) ಪಕ್ಕವಾದ್ಯ ಸಾಥ್ ನೀಡಲಿದ್ದಾರೆ ಎಂದು ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಜೆ. ಎಸ್. ಶ್ರೀಕಂಠ ಭಟ್ ತಿಳಿಸಿದ್ದಾರೆ.