Tuesday, March 28, 2023

Latest Posts

‘40% ಕಮಿಷನ್ ಸರ್ಕಾರ ಅಂತ ನಾವ್ ಇದಕ್ಕೆ ಹೇಳೋದು, ಇದಕ್ಕಿಂತ ಸಾಕ್ಷಿ ಬೇಕಾ?’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಂಚ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಸಿಕ್ಕಿಹಾಕಿಕೊಂಡಿದ್ದು, 40% ಕಮಿಷನ್ ಸರ್ಕಾರ ಅಂತ ನಾವು ಇದನ್ನೆ ಹೇಳ್ತಿದ್ದದ್ದು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಅಮಿತ್ ಶಾ ಅವರು ರಾಜ್ಯಕ್ಕೆ ಬಂದಿದ್ದಾರೆ, ನಿಮ್ಮ ಡಬಲ್ ಇಂಜಿನ್ ಸರ್ಕಾರ 40% ಕಮಿಷನ್ ಉಡಾಯಿಸುತ್ತಿದೆ ಎನ್ನೋದಕ್ಕೆ ಇಲ್ಲೇ ಉದಾಹರಣೆ ಸಿಕ್ಕಿದೆ. 40% ಕೊಚ್ಚೆಯಲ್ಲಿ ಸರ್ಕಾರ ಉರುಳಾಡುತ್ತಿದೆ ಅನ್ನೋದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಬೇಕಿಲ್ಲ. ಶಾಸಕರ ಪುತ್ರರತ್ನಗಳೇ ಹೀಗೆ, ಇನ್ನು ಶಾಸಕರ ಕಥೆ ಏನು? ಇನ್ನೆಷ್ಟು ಶಾಸಕರು ನಮಗೆ ಸಿಗಬಹುದು ಎಂದು ಪ್ರಶ್ನಿಸಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!