ನಾವೆಲ್ಲ ಒಂದು ಎಂಬ ಭಾವ ನಮ್ಮಲ್ಲಿರಬೇಕು: ಕೃಷ್ಣ ಜೋಶಿ

ಹೊಸದಿಗಂತ ವರದಿ, ಕಲಬುರಗಿ

ಇಂದಿನ ಬದಲಾದ ಕಾಲಘಟ್ಟದಲ್ಲಿ ನಮ್ಮ ಸನಾತನ ಹಿಂದು ಧಮ೯ದ ಸಂಸ್ಕೃತಿಯನ್ನು ನಾವೇ ಮರೆಯುತ್ತಿದ್ದೇವೆ ಎಂದು ರಾಷ್ಟೀಯ ಸ್ವಯಂಸೇವಕ ಸಂಘದ ಕನಾ೯ಟಕ ಉತ್ತರ ಪ್ರಾಂತ್ಯದ ಬೌದ್ಧಿಕ ಪ್ರಮುಖರಾದ ಕೃಷ್ಣ ಜೋಶಿ ಕಳವಳ ವ್ಯಕ್ತಪಡಿಸಿದರು.

ನಗರದ ಮಾಕಾ ಲೇಔಟ ಪವರ್ ಬಡಾವಣೆಯ ರಾಮಕೃಷ್ಣ ಭಟ್ ಅವರ ಮನೆಯಲ್ಲಿ ಆಯೋಜಿಸಿದ್ದ ರಕ್ಷಾ ಬಂಧನ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ನಮ್ಮ ಸಮಾಜದ ಸುತ್ತ ಮುತ್ತಲಿನ ಬಾಂಧವರನ್ನು ನಾವೆಲ್ಲರೂ ನಮ್ಮ ಬಂಧುಗಳು ಎಂದು ಭಾವಿಸಬೇಕು.ನಾವೆಲ್ಲ ಬಂದು,ನಾವೆಲ್ಲ ಒಂದು,ನಾವೆಲ್ಲ ಹಿಂದು ಎಂದು ಅರಿತಾಗ ಮಾತ್ರ ಸಮಾಜದ ಉಜ್ವಲ ಭವಿಷ್ಯವಿದೆ ಎಂದರು.

ಭಾರತೀಯ ಸಂಸ್ಕೃತಿ ಯಲ್ಲಿ ಹಬ್ಬಗಳು ಸಾಕಷ್ಟಿವೆ.ಆದರೆ, ಪ್ರತಿ ಹಬ್ಬದ ಹಿಂದಿನ ಸಾರತ್ವವನ್ನು ಅರಿತು ಅವುಗಳ ಆಚರಣೆ ಮಾಡಬೇಕು. ಭಾರತದ ಇತಿಹಾಸದಲ್ಲಿ ಸಹೋದರ ಸಹೋದರಿಯರ ಹಬ್ಬವೆಂದೆ ಈ ರಕ್ಷಾ ಬಂಧನ ಹಬ್ಬವನ್ನು ನಾವು ನೋಡುತ್ತೇವೆ.ಆದರೆ, ಇದರ ನಿಜವಾದ ಅಥ೯ ನಮ್ಮ ಅಕ್ಕ ತಂಗಿಯರ ಸಂರಕ್ಷಣೆ ಜೊತೆಗೆ ನಮ್ಮ ಸಮಾಜದ ಬಾಂದವರ ರಕ್ಷಣೆಯೂ ನಮ್ಮ ಹೊಣೆಯಾಗಬೇಕು ಎಂದರು.

ಕಷ್ಟಕ್ಕೆ ಸ್ಪಂಧಿಸುವ ಭಾವ ನಮ್ಮ ಹತ್ತಿರ ಬೆಳೆಯಬೇಕು.ಭಾರತ ಮಾತೇಯ ಮಕ್ಕಳು ನಾವೆಲ್ಲರೂ. ನಮ್ಮ ಭರತ ಭೂಮಿಯನ್ನು ಮಾತೃಭೂಮಿ ಎಂದು ಗೌರವಿಸಬೇಕು.ವಿದೇಶಿ ಸಂಸ್ಕೃತಿ ಗೆ ನಾವು ಜೋತು ಬಿದ್ದಾಗಿದೆ.ಇದರಿಂದ ಹೊರಬಂದು ನಮ್ಮ ಸನಾತನ ಧರ್ಮದ ಸಂಸ್ಕೃತಿ ಆಚರಣೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ರಾಮ ಭಟ್ ಸನ್ನತ್ತಿ,ಸೀತಾರಾಮ ಜೋಶಿ,ಮನೋಹರ ಮಾಡಗೆ,ಗೋಪಾಲ ಕುಲಕರ್ಣಿ, ಲಕ್ಷ್ಮಿಕಾಂತ ಕೋರವಿ,ದೀಪಾ ಭಟ್,ಹೇಮಾ ಕುಲಕರ್ಣಿ, ಜ್ಯೋತಿ, ರಾಜೇಶ್ವರಿ ಮಾತಾಜೀ,ಶೀಲಾ ಮಾತಾಜೀ ಸೇರಿದಂತೆ ಇತರೆ ಮಾತೇಯರು ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!