ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ: ನೇಪಾಳದ ನೂತನ ಪ್ರಧಾನಿ ಪ್ರಚಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ನೇಪಾಳದ ನೂತನ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಭಾರತದ ಕುರಿತು ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮಾತನಾಡಿದ್ದಾರೆ.

ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ. ನಾವು ಭಾರತದ ವಿರೋಧಿಯಲ್ಲ, ಹಳೆಯ ವಿವಾದಗಳನ್ನು ಮರೆತು ಮುನ್ನಡೆಯುತ್ತೇವೆ’ ಎಂದು ಪ್ರಚಂಡ ಹೇಳಿದರು.

ಪ್ರಧಾನಮಂತ್ರಿಯಾಗಿ ಆಯ್ಕೆಯಾದ ನನ್ನನ್ನು ಮೊದಲಿಗೆ ಅಭಿನಂದಿಸಿದು ಭಾರತದ ರಾಯಭಾರಿ . ಅದರ ನಂತರ, ಪ್ರಧಾನಿ ಮೋದಿ ಅವರು ತಮ್ಮ ಶುಭಾಶಯಗಳನ್ನು ಟ್ವೀಟ್ ಮಾಡಿದ್ದಾರೆ ಮತ್ತು ಭಾರತ ಮತ್ತು ನೇಪಾಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಮಾತನಾಡಿದರು.

ನಾನು ಕಳೆದ ಬಾರಿ ಭಾರತಕ್ಕೆ ಹೋದಾಗ, ನಮ್ಮ ಎರಡು ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವ ಬಗ್ಗೆ ಮಾತನಾಡಲಾಗಿತ್ತು. ಎರಡೂ ದೇಶಗಳು ಪರಸ್ಪರ ಉತ್ತಮ ಸಂಬಂಧವನ್ನು ಬಯಸುತ್ತವೆ. ನಾವು ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಇದೇ ವೇಳೆ ರಾಮಜನ್ಮಭೂಮಿ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿದ ಪ್ರಚಂಡ, ಯಾವುದೇ ಸಮಸ್ಯೆಯಿದ್ದರೆ ಮಾತುಕತೆಯ ಮೂಲಕ ಪರಿಹರಿಸಲಾಗುವುದು. ಈ ಹಿಂದೆಯೂ ಸಹ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ನಾವು ಎಲ್ಲಾ ನೆರೆಯ ಸ್ನೇಹಪರ ದೇಶಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!