ಮೈಸೂರಿನಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪಿಸಿದರೆ ಧ್ವಂಸ ಮಾಡುತ್ತೇವೆ: ಮುತಾಲಿಕ್

ಹೊಸದಿಗಂತ ವರದಿ ಹುಬ್ಬಳ್ಳಿ:

ನಗರದ ರಾಣಿ ಚನ್ನಮ್ಮ ಮೈದಾನದಲ್ಲಿ ಶ್ರೀರಾಮ‌ ಸೇನಾ ವತಿಯಿಂದ ಶುಕ್ರವಾರ ಕನಕದಾಸರ ಜಯಂತಿ ಆಚರಿಸಲಾಯಿತು. ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರ ನೇತೃತ್ವದಲ್ಲಿ ಮೈದಾನದಲ್ಲಿ ಪೆಂಡಲ್ ಹಾಕಿ ಕನಕದಾಸರ ಭಾವಚಿತ್ರವಿಟ್ಟು ಪುಷ್ಪಾ ಹಾಗೂ ಪೂಜೆ ಸಲ್ಲಿಸಲಾಯಿತು.

ದಾಸ ಶ್ರೇಷ್ಠ ಕನಕದಾಸರಿಗೆ ಜಯವಾಗಲಿ ಎಂದು ಜಯಕಾರ ಕೂಗಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮೋದ ಮುತಾಲಿಕ್, ಕಾಂಗ್ರೆಸ್ ಶಾಸಕ ತನ್ವೀರ್ ಶೇಠ್ ಹೇಳಿಕೆಯಂತೆ ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ಸ್ಥಾಪಿಸಿದ್ದೇ ಆದರೆ, ಬಾಬರಿ ಮಸೀದಿಯಂತೆ ಅದನ್ನು ಸಹ ಧ್ವಂಸ ಮಾಡಲಾಗುವುದು ಎಂದರು.

‘ಟಿಪ್ಪು ಕರ್ನಾಟಕಕ್ಕೇ ಕಳಂಕ. ಮೈಸೂರು ಮಹಾರಾಜರಿಗೆ ಅವಮಾನವಾಗುವಂತೆ ಅಲ್ಲಿಯೇ ಆಡಳಿತ ನಡೆಸಿದ್ದ. ಒಂದು ವೇಳೆ ಅವನ ಮೂರ್ತಿ ಪ್ರತಿಷ್ಠಾಪಿಸಿದ್ದೇ ಆದರೆ, ಅದನ್ನು ಒಡೆದು ಹಾಕುತ್ತೇವೆ. ಅವನ ಮೂರ್ತಿ ಪ್ರತಿಷ್ಠಾಪಿಸುವಂಥ ಕೆಟ್ಟ ಕೆಲಸಕ್ಕೆ ಯಾರೂ ಕೈ ಹಾಕಬಾರದು. ಬೇಕಾದರೆ, ಸಂತ ಶಿಶುನಾಳ‌ ಷರೀಫ್, ಅಬ್ದುಲ್ ಕಲಾಂ‌ ಅಂತವರ ಮೂರ್ತಿ ಪ್ರತಿಷ್ಠಾಪಿಸಿ ಎಂದು ಸಲಹೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!