ಪ್ರಧಾನಿ ಹಸ್ತದಲ್ಲಿ ನಾಡಿನ ಹೆಮ್ಮೆ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾಡಕಟ್ಟಿದ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ʻಪ್ರಗತಿಯ ಪ್ರತಿಮೆʼ ಇಂದು ಪ್ರಧಾನಿ ಮೋದಿ ಕೈಯಿಂದ ಅನಾವರಣಗೊಂಡಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾಪರ್ಣೆಗೊಂಡಿದೆ. ಅನಾವರಣಕ್ಕೂ ಮುನ್ನವೇ ‘ವಿಶ್ವ ಬುಕ್ ಆಫ್ ರೆಕಾರ್ಡ್ಸ್’ ಸೇರಿದ ಈ ಕಂಚಿನ ಪ್ರತಿಮೆಯನ್ನು ಬೆಂಗಳೂರು ನಗರದ ಬೆಳವಣಿಗೆಗೆ ಕಾರಣರಾದ ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಲು ನಿರ್ಮಿಸಲಾಗಿದೆ. ಪ್ರತಿಮೆಯನ್ನು ಖ್ಯಾತ ಶಿಲ್ಪಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ರಾಮ್ ವಾಂಜಿ ಸುತಾರ್ ವಿನ್ಯಾಸಗೊಳಿಸಿದ್ದಾರೆ

ಈ ಸಂದರ್ಭದರಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮೆಯಿ, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಉಪಸ್ಥಿತರಿದ್ದರು. ಉದ್ಘಾಟನೆ ಬಳಿಕ ಪ್ರಧಾನಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಕಂಚಿನ ಪ್ರತಿಮೆಯ ವಿಶೇಷತೆ

  • ಕಂಚಿನ ಪ್ರತಿಮೆಯ ತೂಕ ಬರೋಬ್ಬರಿ 220ಟನ್.‌ ಅದರಲ್ಲಿ ಕಂಚು 98 ಕೆಜಿ, ಅಡಿಪಾಯಕ್ಕಾಗಿ ಬಳಸಲಾದ ಕಬ್ಬಿಣ 120 ಟನ್‌.
  • 18 ಅಡಿ ವಿಸ್ತಾರವಾದ ಕಟ್ಟೆಯನ್ನು ಪ್ರತಿಮೆಯ ಅಡಿಯಲ್ಲಿ ನಿರ್ಮಾಣ
  • ಕೆಂಪೇಗೌಡರ ಜೀವನ ಪ್ರಮುಖ ಘಟನೆಗಳನ್ನು ಬಣ್ಣಿಸುವ ನಾಲ್ಕು ಉಬ್ಬು ಶಿಲ್ಪಗಳ ರಚನೆ, ಕಂಚಿನಲ್ಲಿಯೇ ತಯಾರಾದ ಉಬ್ಬು ಶಿಲ್ಪಗಳನ್ನು ನಾಲ್ಕು ಕಡೆ ಅಂಟಿಸಲಾಗಿದೆ
  • ಕೆಂಪೇಗೌಡರ ಕೈಯಲ್ಲಿರುವ ಖಡ್ಗದ ತೂಕ 4ಟನ್‌
  • ಕಂಚಿನ ಪ್ರತಿಮೆ ನಿರ್ಮಾಣಕ್ಕ ತೆಗೆದುಕೊಂಡ ಸಮಯ 18ತಿಂಗಳು
  • ಅನಾವರಣಕ್ಕೆ ಪೂರ್ವಭಾವಿಯಾಗಿ ರಾಜ್ಯದಾದ್ಯಂತ 22,000 ಕ್ಕೂ ಹೆಚ್ಚು ಸ್ಥಳಗಳಿಂದ ‘ಮೃತ್ತಿಕೆ’ (ಪವಿತ್ರ ಮಣ್ಣು) ಸಂಗ್ರಹಣೆ
  • ಪ್ರತಿಮೆ ಬಳಿ 23 ಎಕರೆ ಪ್ರದೇಶದಲ್ಲಿ ಹೆರಿಟೇಜ್ ಥೀಮ್ ಪಾರ್ಕ್ ನಿರ್ಮಾಣ
  • ಥೀಮ್‌ ಪಾರ್ಕ್‌, ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಭರಿಸಿದ ವೆಚ್ಚ ಸುಮಾರು ₹ 84 ಕೋಟಿ

#statue of prosperity #NadaPrabhu Kempegowda #PM Modi #KIAL Airport

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!