Sunday, December 3, 2023

Latest Posts

ಲೋಕಸಭೆಯ ಚುನಾವಣೆ ನಂತರವೂ ನಮ್ಮದೇ ಸರ್ಕಾರ ಇರಲಿದೆ : ಕಾಶಪ್ಪನವರ

ಹೊಸದಿಗಂತ ವರದಿ ಬಾಗಲಕೋಟೆ :

ಲೋಕಸಭೆ ಚುನಾವಣೆ ನಂತರ ರಾಜ್ಯ ಸರ್ಕಾರ ಬೀಳಲ್ಲ, ಕೇಂದ್ರದಲ್ಲಿ ರಾಹುಲ್ , ಪ್ರಿಯಾಂಕ, ನಲ್ಲಿ ಕಾರ್ ನಯನ ಖರ್ಗೆ ನೇತೃತ್ವದಲ್ಲಿ ಕೇಂದ್ರದಲ್ಲಿ ನಮ್ಮ‌ ಸರ್ಕಾರ ರಚನೆಯಾಗಲಿದೆ ಎಂದು ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ನವನಗರ ದ ಪತ್ರಿಕಾಭವನಸಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಒಕ್ಕೂಟಗಳು ಸೇರಿಕೊಂಡು ಕೇಂದ್ರ ಸರ್ಕಾರ‌ರಚನೆಯಾಗಲಿದೆ ಎಂದರು. ನಮ್ಮ ಪಕ್ಷಕ್ಕೆ ಬಿಜೆಪಿ‌ ರಾಷ್ಟ್ರೀಯ ನಾಯಕರು‌ ಕೂಡ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ. ಯತ್ನಾಳ ಅಂತಹ ಅಲ್ಲ ಬಹಳಷ್ಟು ಜನ ಬರಲಿದ್ದಾರೆ ಎಂದರು. ಬಾಗಲಕೋಟೆ ಜಿಲ್ಲೆಯಲ್ಲಿ ಸಹ ಕೆಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಬರಲಿದ್ದಾರೆ ಎಂದರು.

ಬಿಜೆಪಿ ಹಾಗೂ ಜೆಡಿಎಸ್ ಸುಳ್ಳು ಹೇಳುತ್ತಿದೆ.ನಮ್ಮ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ನಿರಂತರ ಇರಲಿವೆ. ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ನಿಲ್ಲಿಸಲ್ಲ. ಕೋಮುವಾದಿ ಪಕ್ಷದ ಜತೆ ಸೇರಿರುವ ಕುಮಾರಸ್ವಾಮಿ ಸುಳ್ಳುತ್ತಿದ್ದಾರೆ. ಜೆಡಿಎಸ್ ಪಕ್ಷ ಬಿಜೆಪಿ ಜತೆ ಸೇರಿದ ನಂತರ ಜೆಡಿಎಸ್ ಪಕ್ಷದಲ್ಲಿ ಏನೂ ಉಳಿದಿಲ್ಲ. ಆ ಪಕ್ಷ ತನ್ನ ಅಸ್ತಿತ್ವ ಕಳೆದುಕೊಂಡಿದೆ.

ನಮ್ಮ ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷರು, ನಾಯಕರು ನಿರ್ಧಾರ ಅಂತಿಮ. ನಮ್ಮ ನಮ್ಮ ಅಭಿಮಾನಕ್ಕೆ ಅವರು ಸಿಎಂ ಆಗಬೇಕು ಇವರು ಆಗಬೇಕು ಎಂದು ಕೆಲ ಶಾಸಕರು ಅಭಿಪ್ರಾಯ ಹೇಳುತ್ತಾರೆ ಎಂದರು.
ಲೋಕಸಭೆಯ ಚುನಾವಣೆಯಲ್ಲಿ ನಮ್ಮ ಪತ್ನಿ ವೀಣಾ ಕಾಶಪ್ಪನವರ ಹಿಂದೆ ಸೋತಿದ್ದರೂ ಮನೆಯಲ್ಲಿ ಕುಳತಿಲ್ಲ, ಅನೇಕ ಧಾರ್ಮಿಕ, ಕಾರ್ಯಕ್ರಮ ಹಾಗೂ ಪಕ್ಷದ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಅವರು ಖಂಡಿತಾ ಲೋಕಸಭೆಯ ಬಾಗಲಕೋಟ ಅಭ್ಯರ್ಥಿಯಾಗಲಿದ್ದಾರೆ. ಅವರಿಗೆ ನಮ್ಮ ನಾಯಕರು ಬೆಂಬಲ ಇರಲಿದ್ದಾರೆ. ನಮ್ಮ ಹೈ‌ಕಮಾಂಡ ನಮ್ಮ ಬೆನ್ನಿಗೆ ಇದ್ದಾರೆ. ಜಿಲ್ಲೆಯ ನಾಯಕರು ನಮ್ಮ ಜತೆ ಇದ್ದಾರೆ ಈ ಭಾರಿ ವೀಣಾ ಕಾಶಪ್ಪನವರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!