ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಗಳನ್ನು ಹೇಮಾಮಾಲಿನಿ ಕೆನ್ನೆಯಂತೆ ಮಾಡುತ್ತೇವೆ ಎಂದು ಆಪ್ ಶಾಸಕ ನರೇಶ್ ಬಲ್ಯಾನ್ ನಾಲಿಗೆ ಹರಿಬಿಟ್ಟಿದ್ದಾರೆ
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳಾ ವಿರೋಧಿ ಹೇಳಿಕೆ ನೀಡಿದ್ದ ಉತ್ತಮ್ ನಗರ ಶಾಸಕ ನರೇಶ್ ಬಲ್ಯಾನ್ ವಿರುದ್ಧ ವಾಗ್ದಾಳಿ ನಡೆಸಿ, ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ಗೆ ಬಲ್ಯಾನ್ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಫೇಸ್‌ಬುಕ್ ಲೈವ್ ವೀಡಿಯೊವೊಂದರಲ್ಲಿ, “ಎಲ್ಲವೂ ಸರಿಹೋಗುತ್ತದೆ…ಉತ್ತಮ್‌ನಗರದ ರಸ್ತೆಗಳನ್ನು ಹೇಮಾಮಾಲಿನಿ ಕೆನ್ನೆಯಂತೆ ಮಾಡುತ್ತೇವೆ” ಎಂದು ನರೇಶ್ ಬಲ್ಯಾನ್ ಹೇಳಿದ್ದರು.
ಬಲ್ಯಾನ್ ಅವರ ಈ ಹೇಳಿಕೆಯನ್ನು ಖಂಡಿಸಿರುವ ಸ್ವಾತಿ ಮಲಿವಾಲ್ ಅವರ ವಿರುದ್ಧ ಕಿಡಿ ಕಾರಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬಲ್ಯಾನ್ ವಿರುದ್ಧ ಬರೆದಿರುವ ಅವರು ದೆಹಲಿಯ ಉತ್ತಮ್ ನಗರ ಶಾಸಕ ನರೇಶ್ ಬಲ್ಯಾನ್ ಅವರು “ನಾವು ರಸ್ತೆಗಳನ್ನು ಹೇಮಾ ಮಾಲಿನಿಯ ಕೆನ್ನೆಯಂತೆ ಮಾಡುತ್ತೇವೆ” ಎಂದು ಹೇಳುತ್ತಾರೆ! ಈ ಮಹಿಳಾ ವಿರೋಧಿ ಹೇಳಿಕೆಯನ್ನು ಎಷ್ಟು ಖಂಡಿಸಿದರೂ ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಮನುಷ್ಯ ಇಡೀ ಹತ್ತು ವರ್ಷಗಳಿಂದ ನಿದ್ದೆ ಮಾಡುತ್ತಿದ್ದಾನೆ, ಇದರಿಂದಾಗಿ ಉತ್ತಮನಗರದ ರಸ್ತೆಗಳು ಹದಗೆಟ್ಟಿವೆ! ಇಂದಿಗೂ ಕೆಲಸ ಮಾಡದೆ, ಅವರು ತಮ್ಮ ಕಳಪೆ ಚಿಂತನೆಯನ್ನು ಪ್ರದರ್ಶಿಸುತ್ತಿದ್ದಾರೆ. ಉತ್ತಮನಗರದ ಅಭಿವೃದ್ಧಿಗೆ ಏನೂ ಮಾಡಿಲ್ಲ ಎಂದು ಮಲಿವಾಲ್ ಬಲ್ಯಾನ್ ವಿರುದ್ಧ ವಾಗ್ದಾಳಿ ನಡೆಸಿದರು. ಬಲ್ಯಾನ್ ಮಹಿಳೆಯರಿಗೆ ಅವಮಾನವಾಗುಂತೆ ಮಾತನಾಡಿದ್ದಾರೆಮಹಿಳಾ ವಿರೋಧಿ ಚಿಂತನೆಗಾಗಿ ಬಾಲ್ಯಾನ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಅವರು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಕೇಳಿದರು.
ಮಹಿಳೆಯರನ್ನು ವಸ್ತುವಾಗಿ ಪರಿಗಣಿಸುವ ಇಂತಹ ಅಗ್ಗದ ಚಿಂತನೆಗೆ ಸಮಾಜದಲ್ಲಿ ಸ್ಥಾನವಿಲ್ಲ. ಹಾಗಾಗಿ ಇಂತವರನ್ನು ಪಕ್ಷದಿಂದ ವಜಾಗೊಳಿಸಬೇಕು ಎಂದು ಅರವಿಂದ್ ಕೇಜ್ರಿವಾಲ್‌ಗೆ ಒತ್ತಾಯಿಸಿದ್ದಾರೆ.