July 12, 2026
Sunday, July 12, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 26 | ಇಡ್ಲಿ, ದೋಸೆ ತಿಂದು ಬೇಜಾರಾಗಿದ್ಯಾ? ಹಾಗಾದ್ರೆ ಈ ಡಿಫರೆಂಟ್ ಬ್ರೇಕ್‌ಫಾಸ್ಟ್ ಟ್ರೈ ಮಾಡಿ

ಬೆಳಗಿನ ಬ್ರೇಕ್‌ಫಾಸ್ಟ್ ಆರೋಗ್ಯಕರವಾಗಿರಬೇಕು, ಜತೆಗೆ ಬೇಗನೆ ರೆಡಿ ಆಗಬೇಕು. ಅದಕ್ಕಾಗಿ ಮಾರುಕಟ್ಟೆಯ ಇನ್‌ಸ್ಟಂಟ್ ಮಿಕ್ಸ್‌ಗಳ ಬದಲಾಗಿ, ಮನೆಯಲ್ಲೇ ಇರೋ ಗೋಧಿ ಹಿಟ್ಟಿನಿಂದ ಈ ಪೌಷ್ಟಿಕಾಂಶಭರಿತ ಕಡಬನ್ನು ತಯಾರಿಸಬಹುದು. ಇದು ಮಧುಮೇಹಿಗಳಿಗೆ ಮತ್ತು ಡಯಟ್ ಮಾಡುವವರಿಗೆ ಅತ್ಯುತ್ತಮ ಉಪಹಾರವಾಗಿದೆ.

ಬೇಕಾಗುವ ಸಾಮಗ್ರಿಗಳು

 ಗೋಧಿ ಹಿಟ್ಟು

ನೀರು

ಉಪ್ಪು

ಎಣ್ಣೆ ಅಥವಾ ತುಪ್ಪ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಗೆ ಗೋಧಿ ಹಿಟ್ಟು, ಸ್ವಲ್ಪ ಉಪ್ಪು ಮತ್ತು ಒಂದು ಚಮಚ ಎಣ್ಣೆ/ತುಪ್ಪ ಹಾಕಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಚಪಾತಿ ಹಿಟ್ಟಿಗಿಂತ ಕೊಂಚ ಗಟ್ಟಿಯಾಗಿ ಕಲಸಿ 10 ನಿಮಿಷ ನೆನೆಯಲು ಬಿಡಬೇಕು. ಕಲಸಿದ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ. ಪ್ರತಿ ಉಂಡೆಯನ್ನು ಸಣ್ಣ ಪೂರಿಯಂತೆ ಲಟ್ಟಿಸಿ, ನಂತರ ಕೈಯಿಂದ ಒತ್ತಿ ಸಣ್ಣ ಬಟ್ಟಲಿನ ಆಕಾರ ನೀಡಿ.

ಇಡ್ಲಿ ಪಾತ್ರೆಯಲ್ಲಿ ನೀರನ್ನು ಕಾಯಲು ಇಟ್ಟು, ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ, ಮಾಡಿಟ್ಟುಕೊಂಡ ಕಡುಬುಗಳನ್ನು ಅದರಲ್ಲಿಟ್ಟು, ಮುಚ್ಚಳ ಮುಚ್ಚಿ 10 ರಿಂದ 12 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿದರೆ ಬಿಸಿಬಿಸಿಯಾದ ಗೋಧಿ ಕಡುಬು ಸಿದ್ಧ ಇದರ ಮೇಲೆ ತುಪ್ಪ ಹಾಗೂ ಮೆಂತ್ಯ ಚಟ್ನಿ ಹಾಕಿಕೊಂಡು ಸವಿಯಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !