ಹವಾಮಾನ ವೈಪರೀತ್ಯ: ನಾಸಾದ ಅರ್ಥೆಮಿಸ್ 1 ಉಡಾವಣೆ ಮುಂದೂಡಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹವಾಮಾನ ವೈಪರೀತ್ಯದಿಂದಾಗಿ ನಾಸಾದ ಬೃಹತ್ ಮೂನ್ ರಾಕೆಟ್ ಅರ್ಥೆಮಿಸ್ 1ಮಿಷನ್‌ನ 4 ಆರ್‌ಎಸ್-25 ಇಂಜಿನಗಳಲ್ಲಿ ಒಂದರಲ್ಲಿ ಸಮಸ್ಯೆ ಎದುರಾದ ಹಿನ್ನೆಲೆ ಪರೀಕ್ಷಾರ್ಥ ಉಡಾವಣೆಯನ್ನು ಸೋಮವಾರ ನಾಸಾ ಮುಂದೂಡಿತು. ಇನ್ನು ಅರ್ಥೆಮಿಸ್ 1 ಮಿಷನ್‌ನನ್ನು ಸೆಪ್ಟೆಂಬರ್ 2 ಮತ್ತು 5ರಂದು ಉಡಾವಣೆ ಮಾಡಲಾಗುವುದು ಎಂದು ನಾಸಾ ತನ್ನ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದೆ.

ಉಡಾವಣೆ ವೀಕ್ಷಿಸಲು ಅಮೆರಿಕ ಉಪಾಧ್ಯಕ್ಷೆ ಕಮಲ ಹ್ಯಾರಿಸ್ ಸೇರಿದಂತೆ ಹತ್ತು ಸಾವಿರ ಜನರು ಫ್ಲೊರೀಡಾದ ಕೆನಡಿ ಬಾಹ್ಯಕಾಶ ಕೇಂದ್ರದ ಬಳಿಯ ಸಮುದ್ರ ತೀರದಲ್ಲಿ ಸೇರಿದ್ದರು. ಅಪೋಲೊ 12 ಗಗನಯಾತ್ರಿಗಳು ಚಂದ್ರನ ಮೇಲೆ ಕೊನೆಯ ಬಾರಿಗೆ ಕಾಲಿಟ್ಟ 50 ವರ್ಷಗಳ ನಂತರ ಈ ಕಾರ್ಯಾಚರಣೆ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!