WEATHER | ಇಂದು ರಾಜ್ಯಾದ್ಯಂತ ಹೇಗಿರಲಿದೆ ವಾತಾವರಣ, ಇಲ್ಲಿದೆ ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಳಿಗಾಲದಲ್ಲಿ ಶುಷ್ಕ ಹವಾಮಾನವು ಬೇಸಿಗೆಯಂತೆಯೇ ಇರುತ್ತದೆ. ಈಗ ಬೇಸಿಗೆಯ ಆರಂಭದಲ್ಲಿ, ಶಾಖದ ಹೊಡೆತ ಹೆಚ್ಚಾಗಿ ಕಂಡುಬರುತ್ತಿವೆ. ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಕರಾವಳಿಯಲ್ಲೂ ತಾಪಮಾನ ಹೆಚ್ಚಾಗಲಿದೆ. ಉತ್ತರ ಪ್ರದೇಶಗಳಲ್ಲಿ, ಗರಿಷ್ಠ ತಾಪಮಾನವು ದ್ವಿಗುಣಗೊಳ್ಳುತ್ತದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ ಮತ್ತು ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!