ದಿನಭವಿಷ್ಯ: ಇಂದು ಈ ರಾಶಿಗೆ ವಿಶೇಷ ಯೋಗಗಳ ಸಂಯೋಗ

ಮೇಷ
ಇಂದು ವ್ಯವಹಾರದಲ್ಲಿ ಲಾಭ. ಖರ್ಚು ಮಾಡಲು ಯಾವುದೇ ಅಡ್ಡಿ ಇಲ್ಲ. ಕುಟುಂಬ ಸದಸ್ಯರಲ್ಲಿ ಮೂಡಿದ್ದ ಅಸಮಾಧಾನ ನಿವಾರಣೆ, ಸಂತೃಪ್ತಿ.

ವೃಷಭ
ನಿಮಗೆ ಸಂಬಂಧಿಸಿದ ವಿಷಯವೊಂದು ದ್ವಂದ್ವ ಹುಟ್ಟಿಸುವುದು. ಯಾವ ದಾರಿ ಹಿಡಿಯಬೇಕೆಂದು ಅರಿಯದೆ ಗೊಂದಲ. ಮನಸ್ಸಿಗೆ ಕಿರಿಕಿರಿ.

ಮಿಥುನ
ಕೆಲ ವಿಷಯಗಳಲ್ಲಿ ತಕ್ಷಣದ ನಿರ್ಧಾರ ತಾಳಲು ಮನಸ್ಸನ್ನು ಸಿದ್ಧ ಪಡಿಸಬೇಕು. ಇಂದು ಅಂತಹ ಪ್ರಸಂಗ ಉಂಟಾದೀತು. ಇತರರ ನೆರವು ಪಡೆಯಿರಿ.

ಕಟಕ
ನಿಮ್ಮ ತಾಳ್ಮೆ ಕೆಡಿಸುವ ಪ್ರಸಂಗ ಉಂಟಾದೀತು. ಮುಖ್ಯವಾಗಿ ಆಪ್ತ ಸಂಬಂಧದ ವಿಚಾರ ದಲ್ಲಿ ಪ್ರತಿಕೂಲ ಬೆಳವಣಿಗೆ. ಜಗಳದಿಂದ ದೂರವಿರಿ.

ಸಿಂಹ
ದೈಹಿಕ ನೋವು, ಸಮಸ್ಯೆ ಎದುರಿಸುವಿರಿ. ಅದಕ್ಕೆ ನಿಮ್ಮ ಅತಿರೇಕದ ಭಾವನೆ ಕಾರಣವಾಗಿರ ಬಹುದು. ಇಂದು ಮನಸ್ಸು ಗೊಂದಲದ ಗೂಡಾಗಿರುವುದು.

ಕನ್ಯಾ
ಮನೆಯಲ್ಲಿ ನಿಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ಸಮಸ್ಯೆ ಎದುರಿಸುವಿರಿ. ಇದರಿಂದ ಇತರರ ಟೀಕೆಗೆ ಗುರಿಯಾಗುವಿರಿ.

ತುಲಾ
ಕುಟುಂಬಸ್ಥರ ಜತೆ ಹೆಚ್ಚು ಸಮಯ ಕಳೆಯುವ ಅವಕಾಶ. ಸಣ್ಣಪುಟ್ಟ ಭಿನ್ನಮತ ಉಂಟಾದರೂ ಒಟ್ಟಿನಲ್ಲಿ ನೆಮ್ಮದಿಯ ದಿನ. ಆರ್ಥಿಕ ಉನ್ನತಿ. ಖರ್ಚು ಸೀಮಿತ.

ವೃಶ್ಚಿಕ
ಮನಸ್ಸಿಗೆ ನೆಮ್ಮದಿ ತರುವಂತಹ ಬೆಳವಣಿಗೆ. ಕೆಲದಿನಗಳಿಂದ ಕಾಡುತ್ತಿದ್ದ ಚಿಂತೆ ನಿವಾರಣೆ. ಆಪ್ತರ ಜತೆಗಿನ ವೈಮನಸ್ಸು ಪರಿಹಾರ.

ಧನು
ನ್ಯಾಯವಾದ ವಿಷಯ ಬೆಂಬಲಿಸಲು ಹಿಂಜರಿಕೆ ತೋರದಿರಿ. ಇದರಿಂದ ಕೆಲವರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆಯಿದೆ. ಆ ಬಗ್ಗೆ ಚಿಂತಿಸದಿರಿ. ದೃಢವಾಗಿರಿ.

ಮಕರ
ಇಂದು ತಾಳ್ಮೆಯಿಂದ ವರ್ತಿಸಿದರೆ
ಕಠಿಣ ಕೆಲಸವನ್ನೂ ಪೂರೈಸಬಲ್ಲಿರಿ. ಇತರರ ಪ್ರಭಾವಕ್ಕೆ ಸಿಲುಕದೆ ನಿಮ್ಮದೇ ಸ್ವಂತ ನಿರ್ಧಾರ ತಾಳಿ.

ಕುಂಭ
ನಿಮ್ಮ ವ್ಯವಹಾರದಲ್ಲಿ ಹಠಾತ್ ತಿರುವು ಸಂಭವಿಸಬಹುದು. ಆರ್ಥಿಕ ಪರಿಸ್ಥಿತಿ ನಿಮಗೆ ಅನುಕೂಲಕರ ಆಗುವುದು. ಬಂಧುಗಳ ಸಹಕಾರ.

ಮೀನ
ಆತ್ಮಸಂತೃಪ್ತಿ ಮತ್ತು ಜನಪ್ರಿಯತೆ ಎರಡೂ ನಿಮಗಾಗುವುದು. ಕೆಲಸದಲ್ಲಿ ನೀವು ಬಯಸಿದ ಸಾಧನೆ ತೋರುವಿರಿ. ಎಲ್ಲರಿಂದ ಮೆಚ್ಚುಗೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!