November 21, 2026
Saturday, November 21, 2026
spot_img

WEATHER | ರಾಜ್ಯದಲ್ಲಿ ಏರಿಳಿಯುತ್ತಿದೆ ತಾಪಮಾನ: ಬೆಳಿಗ್ಗೆ ನಡುಗಿಸುವ ಚಳಿ, ಮಧ್ಯಾಹ್ನ ಸುಡುವ ಬಿಸಿಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಾದ್ಯಂತ ಸದ್ಯ ಒಣ ಹವೆಯ ವಾತಾವರಣ ಮುಂದುವರಿದಿದ್ದು, ಹಗಲು ಮತ್ತು ರಾತ್ರಿಯ ತಾಪಮಾನದಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಗಲಿನ ವೇಳೆ ಬಿಸಿಲಿನ ಝಳವಿದ್ದರೆ, ಮುಂಜಾನೆ ಮತ್ತು ರಾತ್ರಿ ಹೊತ್ತು ಮೈಕೊರೆಯುವ ಚಳಿಯ ಅನುಭವವಾಗುತ್ತಿದೆ.

ಕರಾವಳಿ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಇಂದು ಸಂಪೂರ್ಣ ಒಣಹವೆ ಇರಲಿದೆ. ಮಳೆಯ ಯಾವುದೇ ಮುನ್ಸೂಚನೆ ಇಲ್ಲದ ಕಾರಣ, ಹಗಲಿನಲ್ಲಿ ತೀಕ್ಷ್ಣವಾದ ಬಿಸಿಲು ಹಾಗೂ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರಲಿದ್ದು, ಕರಾವಳಿ ಜನತೆಗೆ ಸೆಕೆಯ ಅನುಭವವಾಗಲಿದೆ.

ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಆಕಾಶವು ಶುಭ್ರವಾಗಿರಲಿದೆ. ಆದರೆ, ಮುಂಜಾನೆ ಮತ್ತು ರಾತ್ರಿ ವೇಳೆ ತಂಪಾದ ಗಾಳಿ ಬೀಸಲಿದ್ದು, ಚಳಿಯ ತೀವ್ರತೆ ಹೆಚ್ಚಾಗಿರಲಿದೆ. ಹೀಗಾಗಿ ಬೆಳಗಿನ ಜಾವ ಹೊರಗೆ ಬರುವವರು ಬೆಚ್ಚಗಿನ ಉಡುಪು ಧರಿಸುವುದು ಉತ್ತಮ.

ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ, ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ನಿರ್ಮಾಣವಾಗಲಿದೆ. ಮಧ್ಯಾಹ್ನದ ವೇಳೆಗೆ ಮಂಜು ಸರಿದು ಬಿಸಿಲು ಕಾಣಿಸಿಕೊಳ್ಳಲಿದೆ. ವಿಶೇಷವೆಂದರೆ, ದಕ್ಷಿಣ ಒಳನಾಡಿನ ಈ ಭಾಗಗಳಲ್ಲಿ ನವೆಂಬರ್ 23 ಮತ್ತು 24ರ ನಂತರ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Must Read