ಮೇಷ
ತಂಡವಾಗಿ ಕಾರ್ಯಾಚರಿಸಿ. ಯಶಸ್ಸು ಸುಲಭ. ನಾನೊಬ್ಬನೆ ಮಾಡುತ್ತೇನೆ ಎಂಬ ಧೋರಣೆ ಬಿಡಿ. ಒತ್ತಡ ದಿಂದ ತಲೆನೋವು ಸಾಧ್ಯ.
ವೃಷಭ
ನಿಮ್ಮ ಕಾರ್ಯಕ್ಕೆ ಮನ್ನಣೆ. ಶೇರಿನಲ್ಲಿ ಹಣ ಹೂಡಿಕೆ ಲಾಭ ತರಲಿದೆ. ದಂಪತಿ ಭಿನ್ನಮತ ಪರಿಹಾರ. ಏಕಾಕಿಗಳಿಗೆ ಪ್ರೇಮಸಾ-ಲ್ಯ.
ಮಿಥುನ
ನಿಮ್ಮ ನಾಯಕತ್ವ ಗುಣ ಮೆಚ್ಚುಗೆಗೆ ಪಾತ್ರ. ಸಮಸ್ಯೆಗೆ ಭಾವುಕರಾಗಿ ಪ್ರತಿಕ್ರಿಯಿಸಬೇಡಿ. ತಾರ್ಕಿಕ ಪರಿಹಾರ ಕಂಡುಕೊಳ್ಳಿರಿ.
ಕಟಕ
ವೃತ್ತಿ ಒತ್ತಡ ಕಡಿಮೆ. ಹಾಗಾಗಿ ನಿರಾಳತೆ. ಅನಿರೀಕ್ಷಿತ ಆರ್ಥಿಕ ಲಾಭ. ದೇಹಾಭ್ಯಾಸಕ್ಕೆ ಗಮನ ಕೊಡಿ, ಸ್ವಾಸ್ಥ್ಯ ಕಾಪಾಡಿ. ಕೌಟುಂಬಿಕ ಸಾಮರಸ್ಯ.
ಸಿಂಹ
ಕೌಟುಂಬಿಕ ಸಮಸ್ಯೆ ಪರಿಹಾರಕ್ಕೆ ಗಮನ ಕೊಡಿ. ವಾಗ್ವಾದಕ್ಕೆ ಇಳಿಯದಿರಿ. ಇತರರ ಮಾತು ಕೇಳಲೂ ತಯಾರಾಗಿ. ಹಿರಿಯರು ಆಹಾರ ಪಥ್ಯ ಪಾಲಿಸಿ.
ಕನ್ಯಾ
ಹಳೆ ಬಿಕ್ಕಟ್ಟು ಮತ್ತೆ ಕಾಡಬಹುದು. ಅದರತ್ತ ಗಮನ ಕೊಡಿ. ಉದ್ಯೋಗ ಹುಡುಕಾಟ ಸಫಲ. ಮುಖ್ಯ ಕಾರ್ಯದಲ್ಲಿ ಮೀನಮೇಷ ಎಣಿಸದಿರಿ.
ತುಲಾ
ಕಾರ್ಯ ಸಫಲತೆ. ಕ್ಷುಲ್ಲಕ ವಿಚಾರಕ್ಕೆ ಮಹತ್ವ ನೀಡದಿರಿ. ನೀವಾಗಿ ಸಮಸ್ಯೆ ಸೃಷ್ಟಿಸಿಕೊಳ್ಳಬೇಡಿ. ಮನೆಯವರ ಜತೆ ಹೆಚ್ಚು ಕಾಲ ಕಳೆಯಿರಿ.
ವೃಶ್ಚಿಕ
ಸಹನೆ ಬೆಳೆಸಿಕೊಳ್ಳಲು ಯತ್ನಿಸಿ. ಬೇಗನೆ ರೇಗುವ ಸ್ವಭಾವ ತ್ಯಜಿಸಿ. ಆರ್ಥಿಕ ಉನ್ನತಿ. ವಿವಾಹಿತರಿಗೆ ಬಯಸಿದ ಬೆಳವಣಿಗೆ. ವೃತ್ತಿ ಒತ್ತಡ ಕಡಿಮೆ.
ಧನು
ಸಿಹಿಕಿಹಿ ಬೆಳವಣಿಗೆ ಎರಡೂ ಸಂಭವಿಸೀತು. ದುಡುಕಿನ ನಿರ್ಧಾರ ತಾಳದಿರಿ. ಸಂಗಾತಿ ಜತೆ ವಾಗ್ವಾದ ಬೇಡ. ಮಕ್ಕಳ ಹೊಟ್ಟೆ ಕೆಡುವ ಸಾಧ್ಯತೆ.
ಮಕರ
ವೃತ್ತಿ ಒತ್ತಡ ಬದಿಗಿಟ್ಟು ಮನೆಯವರ ಜತೆ ಕಾಲ ಕಳೆಯಿರಿ. ಸಣ್ಣ ವಿಷಯಕ್ಕೆ ವಾಗ್ವಾದ ನಡೆಸಬೇಡಿ. ಭಾವುಕ ಸನ್ನಿವೇಶ ಎದುರಿಸುವಿರಿ.
ಕುಂಭ
ಪ್ರಮುಖ ಕಾರ್ಯ ಮುಗಿಸಲು ಸೂಕ್ತ ಸಹಾಯ ಸಿಗಲಿದೆ. ಸರಿಯೆನಿಸದ ಕಾರ್ಯ ಮಾಡಬೇಡಿ. ಈ ಬಗ್ಗೆ ಒತ್ತಡಕ್ಕೆ ಮಣಿಯದಿರಿ.
ಮೀನ
ಕೆಲದಿನಗಳ ಒತ್ತಡ ನಿವಾರಣೆ. ನಿರಾಳತೆ. ಕೌಟುಂಬಿಕ ಸಮಸ್ಯೆ ಪರಿಹಾರ. ವೃದ್ಧರಿಗೆ ಆರೋಗ್ಯ ಸಮಸ್ಯೆ ಕಾಣಿಸಬಹುದು.



