ಗುರು ಗ್ರಹದ ಅತ್ಯದ್ಭುತ ಚಿತ್ರ ಸೆರೆಹಿಡಿದ ʼಜೇಮ್ಸ್‌ ವೆಬ್‌ʼ!

ಹೊಸಗಂತ ಡಿಜಿಟಲ್‌ ಡೆಸ್ಕ್
ಇತ್ತೀಚೆಗಷ್ಟೇ ಉಡಾವಣೆ ಮಾಡಲಾಗಿರುವ ನಾಸಾದ ಶಕ್ತಿಶಾಲಿ ʼಜೇಮ್ಸ್ ವೆಬ್ʼ ಬಾಹ್ಯಾಕಾಶ ದೂರದರ್ಶಕವು ಗುರುಗ್ರಹದ ಅತ್ಯದ್ಭುತ ಚಿತ್ರಗಳನ್ನು ಸೆರೆಹಿಡಿದಿದೆ.
ಜೇಮ್ಸ್‌ ವೆಬ್‌ ಕೆಲದಿನಗಳ ಹಿಂದೆ ಬ್ರಹ್ಮಾಂಡ ಉಗಮದ ಅಮೋಘ ಚಿತ್ರಗಳನ್ನು ಸೆರೆಹಿಡಿದು ಭೂಮಿಗೆ ರವಾನಿಸಿತ್ತು. ಈಗ ಜೇಮ್ಸ್‌ ಸೆರೆಹಿಡಿದು ಕಳುಹಿಸಿರುವ ಚಿತ್ರಗಹಳು ದೈತ್ಯ ಗುರುಗ್ರಹವನ್ನು ಹೆಚ್ಚು ವಿವರವಾಗಿ ತೋರಿಸುತ್ತದೆ. ವಿಜ್ಞಾನಿಗಳಿಗೆ ಗುರುವಿನ ಆಂತರಿಕ ವಿದ್ಯಮಾನಗಳ ಬಗ್ಗೆ ಈ ಚಿತ್ರಗಳು ಇನ್ನಷ್ಟು ಸುಳಿವುಗಳನ್ನು ನೀಡುವುದಾಗಿ ಜೇಮ್ಸ್‌ ನಿರ್ವಹಣಾ ತಂಡ ಹೇಳಿದೆ. ಈ ಚಿತ್ರವನ್ನು 27 ರಂದು ಸೆರೆಹಿಡಿಯಲಾಗಿದೆ. ಚಿತ್ರದಲ್ಲಿ ಗುರುಗ್ರಹದ ಉಂಗುರಗಳು, ಸಣ್ಣ ಉಪಗ್ರಹಗಳು ಮತ್ತು ಗೆಲಕ್ಸಿಗಳನ್ನು ಅತ್ಯಂತ ಸ್ಪಷ್ಟವಾಗಿ ಕಾಣಬಹುದಾಗಿದೆ. ಗುರು ಗ್ರಹದ ಎಲ್ಲಾ ವಿಶೇಷತೆಗಳನ್ನು ಒಂದೇ ಚಿತ್ರದಲ್ಲಿ ನಾವು ವಿವರವಾಗಿ ನೋಡಬಹುದು ಎಂಬುದು ನಿಜವಾಗಿಯೂ ಗಮನಾರ್ಹವಾಗಿದೆ” ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎಮೆರಿಟಾ ಗ್ರಹಗಳ ಖಗೋಳಶಾಸ್ತ್ರಜ್ಞ ಇಮ್ಕೆ ಡಿ ಪಾಟರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಗ್ರಹದ ಸುತ್ತಲೂ ಇರುವ ಅಲಂಕಾರಿಕ ವಿನ್ಯಾಸಗಳನ್ನು ತೋರಿಸಲಾಗಿದೆ. ಜೊತೆಗೆ ಗುರುಗ್ರಹದ ಉತ್ತರ ಮತ್ತು ದಕ್ಷಿಣ ಧ್ರುವಗಳ ಮೇಲಿನ ಅರೋರಾಗಳ ಅಭೂತಪೂರ್ವ ನೋಟವನ್ನು ಒದಗಿಸುತ್ತದೆ.

“ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಷೊಂದು ಉತ್ತಮ ಚಿತ್ರವನ್ನು ನಾವು ನಿಜವಾಗಿಯೂ ನಿರೀಕ್ಷಿಸಿರಲಿಲ್ಲ” ಎಂದು ಇಮ್ಕೆ ಪಾಟರ್  ತಮ್ಮ ಬ್ಲಾಗ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚಿನ ಚಿತ್ರಗಳನ್ನು ಜೇಮ್ಸ್ ವೆಬ್ ವೀಕ್ಷಣಾಲಯದ ನಿಯರ್-ಇನ್‌ಫ್ರಾರೆಡ್ ಕ್ಯಾಮೆರಾ (NIRCam) ಸೆರೆಹಿಡಿಯಲಾಗಿದೆ, ಇದು ಗ್ರಹದ ವಿವರಗಳನ್ನು ಸರೆಹಿಡಿಯುವ ಮೂರು ವಿಶೇಷ ಅತಿಗೆಂಪು ಫಿಲ್ಟರ್‌ಗಳನ್ನು ಹೊಂದಿದೆ.
ಗುರು ಗ್ರಹದ ಉಂಗುರಗಳು ಮತ್ತು ಗುರುಗ್ರಹದ ಎರಡು ಚಿಕ್ಕ ಉಪಗ್ರಹಗಳು (ಅಮಲ್ಥಿಯಾ ಮತ್ತು ಅಡ್ರಾಸ್ಟಿಯಾ) ಹಿನ್ನೆಲೆಯಲ್ಲಿ ಗೆಲಕ್ಸಿಗಳು ಅತ್ಯಂತ ಸ್ಪಷ್ಟವಾಗಿ ಮೂಡಿಬಂದಿವೆ ಎಂದು ನಾಸಾ ಹೇಳಿದೆ. ವೆಬ್ ದೂರದರ್ಶಕವನ್ನು ಫ್ರೆಂಚ್ ಗಯಾನಾದಿಂದ 2021 ರಲ್ಲಿ ಏರಿಯನ್ 5 ರಾಕೆಟ್ ನಲ್ಲಿ ಉಡಾವಣೆ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!