ಬಾಲಿವುಡ್ ಅಂಗಳದಲ್ಲಿ ಮದುವೆ ಸಂಭ್ರಮ: ಹಸಮಣೆ ಏರಲು ರೆಡಿಯಾದ ರಿಚಾ ಚಡ್ಡಾ, ಅಲಿ ಫಜಲ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ ನಟಿ ರಿಚಾ ಚಡ್ಡಾ ಮತ್ತು ಅಲಿ ಫಜಲ್ ಮದುವೆ ಶಾಸ್ತ್ರಗಳು ಪ್ರಾರಂಭವಾಗಿವೆ. ಅಕ್ಟೋಬರ್ 4 ರಂದು ಈ ತಾರಾ ಜೋಡಿ ಹಸೆಮಣೆ ಏರಲಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಕಾಕ್‌ಟೇಲ್ ಪಾರ್ಟಿಯಲ್ಲಿ ಅತ್ಯಾಕರ್ಷಕ ಉಡುಗೆಯಲ್ಲಿ ಕಾಣಿಸಿಕೊಂಡರು.

ಗುರುವಾರ ಸಂಗೀತ ಮತ್ತು ಮೆಹೆಂದಿ ಸಮಾರಂಭ ಎಂಜಾಯ್​ ಮಾಡಿದ ರಿಚಾ ಚಡ್ಡಾ, ಅಲಿ ಫಜಲ್ ಶುಕ್ರವಾರ ರಾತ್ರಿ ನಡೆದ ಕಾಕ್‌ಟೇಲ್ ಪಾರ್ಟಿಯಲ್ಲಿ ಅತ್ಯಾಕರ್ಷಕ ಉಡುಗೆಯಲ್ಲಿ ಕಾಣಿಸಿಕೊಂಡರು. ಈ ವೇಳೆ ಅಲಿ ವರ್ಣರಂಜಿತ ಶೆರ್ವಾನಿ ಧರಿಸಿದ್ದು, ಚಿನ್ನದ ಕಸೂತಿ ಸೀರೆಯಲ್ಲಿ ರಿಚಾ ಮಿಂಚುತ್ತಿದ್ದರು.

2020ರಲ್ಲಿ ರಿಚಾ ಚಡ್ಡಾ ಮತ್ತು ಅಲಿ ಫಜಲ್ ಜೋಡಿ ಮದುವೆ ಆಗುವುದಾಗಿ ಅಧಿಕೃತವಾಗಿ ಹೇಳಿದ್ದರು. ಆದರೆ ಕೊರೊನಾ ಹಿನ್ನೆಲೆ ಮದುವೆ ಮುಂದೂಡಲಾಗಿತ್ತು. ಇದೀಗ ದೆಹಲಿಯಲ್ಲಿ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದ್ದು, ಹಸೆಮಣೆ ಏರಲು ಎಲ್ಲಾ ತಯಾರಿ ನಡೆಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!