ಲೆಜೆಂಡ್ಸ್ ಲೀಗ್ ನಲ್ಲಿ ಅತಿ‌ ವೇಗದ ಅರ್ಧಶತಕ ಸಿಡಿಸಿ ಅಬ್ಬರಿಸಿದ ಕ್ರಿಸ್ ಗೇಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಯೂನಿವರ್ಸಲ್‌ ಬಾಸ್‌ ಕ್ರಿಸ್‌ ಗೇಲ್‌ ಆಡುತ್ತಿದ್ದಾರೆಂದರೆ ಅಲ್ಲಿ ಮನೋರಂಜನೆಗೆ ಯಾವುದೇ ಕೊರತೆಯಿರುವುದಿಲ್ಲ. ಗೇಲ್‌ ಆಟವನ್ನು ಕಣ್ತುಂಬಿಕೊಳ್ಳಲೆಂದೇ ಸಾವಿರಾರು ಅಭಿಮಾನಿಗಳು ಕ್ರೀಡಾಗಣಕ್ಕೆ ಬರುತ್ತಾರೆ. ಪ್ರಸ್ತುತ ಲೆಜೆಂಡ್ಸ್‌ ಕ್ರಿಕೆಟ್‌ ಲೀಗ್‌ ನಲ್ಲಿ ಆಡುತ್ತಿರುವ ಗೇಲ್‌ ಅಭಿಮಾನಿಗಳಿಗೆ ನಿರಾಸೆ ಮಾಡಿಲ್ಲ.  ಜೋಧ್​ಪುರದಲ್ಲಿ ಭಿಲ್ವಾರಾ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಯುನಿವರ್ಸ್ ಬಾಸ್  ಅಕ್ಷರಶಃ ಅಬ್ಬರಿಸಿದ್ದಾರೆ. ಲೀಗ್‌ ನಲ್ಲೇ ಅತಿವೇಗದ ಅರ್ಧಶತಕ ಸಿಡಿಸಿ ಬೌಲರ್‌ ಗಳ ಮೈಚಳಿ ಬಿಡಿಸಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಭಿಲ್ವಾರಾ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಜಯಿಸಿದ ಭಿಲ್ವಾರ ತಂಡದ ಕ್ಯಾಪ್ಟನ್ ಇರ್ಫಾನ್ ಪಠಾಣ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಗುಜರಾತ್ ಜೈಂಟ್ಸ್ ಇನ್ನಿಂಗ್ಸ್‌ ಆರಂಭಿಸಿದ ವೆಸ್ಟ್ ಇಂಡೀಸ್ ಕ್ರಿಕೆಟಿಗರಾದ ಲೆಂಡ್ಲ್ ಸಿಮನ್ಸ್ ಹಾಗೂ ಕ್ರಿಸ್ ಗೇಲ್ ಆರಂಭದಿಂದಲೇ ಅಬ್ಬರಿಸಲಾರಂಭಿಸಿದರು.

ತಮ್ಮ ಹಿಂದಿನ ಸ್ಪೋಟಕ ಇನಿಂಗ್ಸ್ ಗಳನ್ನು ನೆನಪಿಸಿದ ಗೇಲ್‌ ಬಿರುಗಾಳಿಯಂತೆ ಅಬ್ಬರಿಸಿದರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಲೆಜೆಂಡ್ಸ್ ಲೀಗ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಖ್ಯಾತಿಗೆ ಭಾಜನರಾದರು.
ಅರ್ಧಶತಕದ ಬಳಿಕವೂ ಗೇಲ್ ಅಬ್ಬರ ತಗ್ಗಲಿಲ್ಲ. ಗೇಲ್ 40 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 9 ಫೋರ್​ಗಳಿದ್ದ 68 ರನ್​ ಚಚ್ಚಿದರು. ಮತ್ತಯೊಂದೆಡೆ ಗೇಲ್‌ ಗೆ ಸಾಥ್‌ ನೀಡಿದ ಯಶ್​ಪಾಲ್ ಸಿಂಗ್ 37 ಎಸೆತಗಳಲ್ಲಿ 58 ರನ್ ಬಾರಿಸಿದ್ದರಿಂದ ಗುಜರಾತ್ ಜೈಂಟ್ಸ್ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್‌ ಗಳ ಮೊತ್ತವನ್ನು ಕಲೆಹಾಕಿತು.

ಗುರಿ ಬೆನ್ನತ್ತಿದ ಭಿಲ್ವಾರ ಕಿಂಗ್ ತಂಡಕ್ಕೆ ಆರಂಭಿಕ ಆಟಗಾರ ವಿಲಿಯಮ್ (40) ಉತ್ತಮ ಆರಂಭ ಒದಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ಯೂಸುಫ್ ಪಠಾಣ್ ಕೇವಲ 18 ಎಸೆತಗಳಲ್ಲಿ 4 ಸಿಕ್ಸ್, 1 ಫೋರ್​ಗಳಿದ್ದ  39 ರನ್​ ಸಿಡಿಸಿದರು. ಪಂದ್ಯ ರೋಚಕ ಘಟ್ಟದಲ್ಲಿದ್ದಾಗ ಕಣಕ್ಕಿಳಿದ ನಾಯಕ ಇರ್ಫಾನ್ ಪಠಾಣ್ 14 ಎಸೆತಗಳಲ್ಲಿ 1 ಸಿಕ್ಸ್ 2 ಫೋರ್​ ಗಳಿದ್ದ 24 ರನ್ ಚಚ್ಚಿದರು. ಅಂತಿಮವಾಗಿ ಬಿಲ್ವಾಕಿಂಗ್ಸ್ 19.4 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 187 ರನ್​ಗಳನ್ನು ಚೇಸ್‌ ಮಾಡುವ ಮೂಲಕ ವಿಜಯೋತ್ಸವ ಆಚರಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!