ಸಿದ್ಧತಾ ಕಾರ್ಯಗಳಿಂದ ಕಳೆಗಟ್ಟಿದ ಹಾವೇರಿ ಸಾಹಿತ್ಯ ಸಮ್ಮೇಳನ

ಹೊಸ ದಿಗಂತ ವರದಿ, ಹಾವೇರಿ:

ಸಾಹಿತ್ಯ ಸಮ್ಮೇಳನ ಸಿದ್ಧತೆಗಳು ಭರದಿಂದ ಸಾಗಿರುವ ಹಿನ್ನಲೆಯಲ್ಲಿ ನಗರದಲ್ಲಿ ಸಮ್ಮೇಳನ ಜರಗುತ್ತಿದೆ ಎಂಬ ಭಾವನೆಯು ಜನತೆಯಲ್ಲಿ ಮೂಡುತ್ತಿದೆಯಲ್ಲದೆ ಸಮ್ಮೇಳನಕ್ಕೆ ಎಲ್ಲ ಸಿದ್ಧತೆಗಳು ಕಳೆಗಟ್ಟುತ್ತಿವೆ.

ನಗರದ ಹಳೆ ರಾಷ್ಟ್ರೀಯ ಹೆದ್ದಾರಿಯ ಡಿವೈಡರುಗಳಿಗೆ ವಿದ್ಯುತ್ ದೀಪಾಲಾಂಕಾರ, ಈ ರಸ್ತೆಯಲ್ಲಿ ಬರುವ ಎಲ್ಲ ವೃತ್ತಗಳಿಗೆ ಲೈಟ್ ಸರಗಳಿಂದ ಅಲಂಕಾರ ಮಾಡಿರುವುದರಿಂದ ರಸ್ತೆ ಉದ್ದಕ್ಕೂ ಕಮಾನಾಕಾರದಲ್ಲಿ ಹಾಕಲಾಗಿರುವ ಝಗಮಗಿಸುವ ಎಲ್‌ಇಡಿ ಬಲ್ಬ್‌ಗಳಿಂದಾಗಿ ಈ ರಸ್ತೆಗಳಲ್ಲದೆ ಬಹುತೇಕ ನಗರ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದೆ.
ಖವೈಡರುಗಳ ನಡುವಿರುವ ವಿದ್ಯುತ್ ಕಂಬಗಳಿಗೆ ಅವುಗಳ ಎತ್ತರದಷ್ಟು ಉದ್ದ ಕನ್ನಡ ನಾಡಿದ ಧ್ವಝದ ಬಣ್ಣ ಹಳದಿ ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ನೇತು ಬಿಟ್ಟಿರುವುದು ನಿಜಕ್ಕೂ ಕನ್ನಡ ಸಾಹಿತ್ಯ ಸಮ್ಮೇಳನದ ವೈಭವವನ್ನು ಹೆಚ್ಚಿಸುತ್ತಿದೆ.
ಜಿಲ್ಲೆಯ ಹಾಗೂ ನಗರಕ್ಕೆ ಬಂದು ಹೋಗುವ ಜನತೆಯಲ್ಲಿ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾವನೆ ಈಗ ಮೂಡಲಾರಂಭಿಸಿದೆ. ಬಹುತೇಕ ಸಾರ್ವಜನಿಕರು ವೃತ್ತದಲ್ಲಿನ ಬಣ್ಣ ಬಣ್ಣದ ಲೈಟಿನ ಸರಗಳ ಬೆಳಕಿಗೆ ನಿಂತುಕೊಂಡು ಫೋಟೋ ಹಾಗೂ ಸೆಲ್ಫಿ ತಗೆದುಕೋಳ್ಳುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!