ಹೊಸದಿಗಂತ ವರದಿ,ಹುಬ್ಬಳ್ಳಿ:
ಕೊರೋನಾ ಮತ್ತು ರೂಪಾಂತರಿ ಒಮಿಕ್ರಾನ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವು ದರಿಂದ ಸರ್ಕಾರ ಎಚ್ಚೆತ್ತಕೊಂಡು ನಿಯಂತ್ರಿಸಲು ಘೋಷಿಸಿರುವ ವಾರಾಂತ್ಯ ಕರ್ಫ್ಯೂಗೆ ನಗರದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ.
ಶುಕ್ರವಾರ ರಾತ್ರಿಯೇ ರಸ್ತೆಗಿಳಿದ ಪೊಲೀಸರು ಕಟ್ಟು ನಿಟ್ಟಾಗಿ ಬಂದೋಬಸ್ತ ಮಾಡಿದ್ದರು. ಶನಿವಾರ ಬೆಳಿಗ್ಗೆ ಎಂದಿನಂತೆ
ಹಾಲು, ತರಕಾರಿ, ಹಣ್ಣು, ಔಷ ಅಂಗಡಿ, ಕಿರಾಣಿ, ಮಾಂಸ ಮಾರಾಟದ ಅಂಗಡಿ, ಬೇಕರಿಗಳು ತೆರೆದಿದ್ದವ ಆದರೆ ಗ್ರಾಹಕರಿಲ್ಲದೆ ವ್ಯಾಪಾಸ್ಥರು ಅಂಗಡಿಗಳನ್ನು ಮುಚ್ಚಿ ಮರಳಿ ಮನೆಗೆ ಹೋಗಬೇಕಾಗಿತ್ತು.
ಹೊಟೇಲ್‌ಗಳು ಅಲ್ಲಲ್ಲಿ ಪ್ರಮುಖ ಸ್ಥಳಗಳಲ್ಲಿ ತೆರೆದಿದ್ದವಾದರೂ ಪಾರ್ಸಲ್ ವ್ಯವಸ್ಥೆ ಮಾತ್ರವಿತ್ತು.
ಪ್ರಮುಖ ರಸ್ತೆಗಳು ಖಾಲಿ ಖಾಲಿ: ಕಿತ್ತೂರ ಚನ್ನಮ್ಮ ವೃತ್ತ, ಸ್ಟೇಶನ್ ರಸ್ತೆ, ದುರ್ಗದಬೈಲ್, ಹಳೆ ಹುಬ್ಬಳ್ಳಿ, ಕೇಶ್ವಾಪೂರ, ಕೋಪಿಕರ್ ರಸ್ತೆ, ವಿದ್ಯಾನಗರ, ನವನಗರ ಸೇರಿದಂತೆ ಪ್ರಮುಖ ರಸ್ತೆಗಳು ಜನಸಂಚಾರ ಮತ್ತು ಅಂಗಡಿ ಮುಗಟ್ಟು ತೆರೆಯದೆ ಸಂಪೂರ್ಣ ಸ್ಥಬ್ಧವಾಗಿದ್ದವು.
ಬೇರೆ ಜಿಲ್ಲೆಗೆ, ಊರಿಗೆ, ಸರ್ಕಾರಿ ಮತ್ತು ಖಾಸಗಿ ಕೆಲಸಕ್ಕೆ, ಆಸ್ಪತ್ರೆ ಮತ್ತು ತುರ್ತು ಕಾರ್ಯಕ್ಕೆ ಹೋಗುವ ಸಿಬ್ಬಂದಿಗಳು ಕಚೇರಿಯಲ್ಲಿ ನೀಡಿರುವ ಗುರುತಿನ ಚೀಟಿ,ಮುಂಗಡವಾಗಿ ತೆಗೆದ ಟಿಕೆಟ್ ಮತ್ತು ರೋಗಿಗಳಿಗೆ ಸಂಬಂಸಿದ ಚೀಟಿಗಳನ್ನು ಪೊಲೀಸರಿಗೆ ತೋರಿಸಿ ಸಾಗುತ್ತಿದ್ದರು.
ಪೊಲೀಸರಿಂದ ಬೀಗಿ ಬಂದೋಬಸ್ತ: ಇಲ್ಲಿಯ ಚೆನ್ನಮ್ಮನ ವೃತ್ತ, ಕೇಶ್ವಾಪೂರ, ಹೊಸೂರ, ಹಳೆ ಹುಬ್ಬಳ್ಳಿ, ಕಾರವಾರ ರಸ್ತೆ, ವಿದ್ಯಾನಗರ, ನವನಗರ ಸೇರಿದಂತೆ ಶುಕ್ರವಾರ ರಾತ್ರಿ ಬ್ಯಾರಿಕ್ಯಾಡ್ ಅಳವಡಿಸಿದ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸುವ ಮೂಲಕ ವಾಹನ ಹಾಗೂ ಜನರ ಸಂಚಾರ ನಿಯಂತ್ರಿಸಿದರು. ಆದರೆ ಒಳ ರಸ್ತೆಗಳಲ್ಲಿ ಸಾರ್ವಜನಿಕರು ಅನಾವಶ್ಯಕವಾಗಿ ಪೊಲೀಸರ ಭಯವಿಲ್ಲದೆ ಅಲೆದಾಡುತ್ತಿದ್ದರು. ಬಸ್ ಸಂಚಾರ ವಿರಳ: ಎಂದಿನಂತೆ ಬಸ್ ಸಂಚಾರ ವಿದ್ದರು ಆದರೆ ಪ್ರಯಾಣಿಕರನ್ನು ಆಧರಿಸಿ ಬಸ್‌ಗಳನ್ನು ಬಿಡಲಾಗಿತ್ತು. ಬೇರೆ ಜಿಲ್ಲೆಗೆ ಹೋಗುವ ಎಲ್ಲ ಬಸ್‌ಗಳು ಕಡಿಮೆ ಇದ್ದವು. ಬಸ್ ಸಿಗುತ್ತವೆ ಎಂದು ಬಂದ ಪ್ರಯಾಣಿಕರು ತಾಸುಗಟ್ಟಲೆ ಕಾದು ನಿಂತಿರುವ ದೃಶ್ಯಗಳು ಕಂಡು ಬಂದವು. ಗ್ರಾಮೀಣ ಭಾಗದ ಜನರು ಬಾರದೆ ಇರುವುದರಿಂದ ಬಸ್ಸುಗಳು ಅಷ್ಟೇನು ಕಾಣಲಿಲ್ಲ. ಚಿಗರಿ ಬಸ್‌ಗಳು ಸಹ ಕಡಿಮೆ ಬಿಡಲಾಗಿತ್ತು. ವಿದ್ಯಾನಗರ ಕೆಲವು ಬಸ್ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳು ಬಸ್‌ಗಾಗಿ ಕಾದುಕುಳಿತ್ತಿದ್ದರು. ಕೆಲವು ಜನರು ನಡೆದುಕೊಂಡೆ ಮನೆಯತ್ತ ಹೆಜ್ಜೆ ಹಾಕಿದರು. ಖಾಸಗಿ ವಾಹನಗಳಾದ ಲಾರಿ,ಆಟೋ,ಬೈಕ್, ಕಾರುಗಳು ಮಾತ್ರ ಓಡಾಡುತ್ತಿದ್ದವು.
ಗ್ರಾಹಕರಿಲ್ಲದೆ ಸಂತೆಗಳು ಖಾಲಿ: ದುರ್ಗದಬೈಲ್ ಮಾರುಕಟ್ಟೆ, ಜನತಾಬಜಾರ, ಹಳೆ ಹುಬ್ಬಳ್ಳಿ, ಎಪಿಎಂಸಿ ಮತ್ತು ಬೆಂಗೇರಿ ಮಾರುಕಟ್ಟೆಗಳು ಗ್ರಾಹಕರಿಲ್ಲದೆ ಸಂಪೂರ್ಣವಾಗಿ ಕಾಲಿ ಹೊಡೆಯುತ್ತಿದ್ದವು. ಅದರಲ್ಲಿ ಮುಖ್ಯವಾಗಿ ಎಪಿಎಂಸಿ ಮಾರುಕಟ್ಟೆ ಬೆಳಿಗ್ಗೆ ೧೦ ಗಂಟೆವರೆಗೆ ಅಲ್ಪ ಸ್ವಲ್ಪ ಗ್ರಾಹಕರು ಮತ್ತು ವ್ಯಾಪಾರಸ್ಥರ ಕಂಡು ಬಂದರು. ಪೊಲೀಸರು ಜನಸಂದಣೆಯಾಗದಂತೆ ನಿಯಂತ್ರಿಸಿದರು. ೧೦ ಗಂಟೆ ಬಳಿಕ ಗ್ರಾಹಕರ ಸಂಖ್ಯೆ ಪೂರ್ತಿ ಕಡಿಮೆ ಯಾಗಿತು. ಎಂದಿನಂತೆ ರೈತರು ತಾವು ಬೆಳೆದ ಬೆಳೆಗಳನ್ನು ಮಾರಲು ಮಾರುಕಟ್ಟೆಗೆ ಬಂದಿದ್ದರು. ಇದೇ ರೀತಿ ಬೆಂಗೇರಿ ಮಾರುಕಟ್ಟೆಯಲ್ಲಿ ಗ್ರಾಹಕರ ಮತ್ತು ವ್ಯಾಪಾರಸ್ಥ ಸಂಖ್ಯೆ ವಿರಳವಾಗಿತ್ತು.