ಹೊಸದಿಗಂತ ವರದಿ, ಮಡಿಕೇರಿ:
ಸರಕಾರ ವೀಕೆಂಡ್ ಕರ್ಫ್ಯೂ ಘೋಷಿಸಿರುವ ಹಿನ್ನೆಯಲ್ಲಿ ಶನಿವಾರ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಎಲ್ಲಾ ತಾಲೂಕುಗಳು ಜನರ ಓಡಾಟವಿಲ್ಲದೆ ಸ್ತಬ್ಧವಾಗಿತ್ತು.
ವಾಹನಗಳ ಸಂಚಾರವೂ ಅಷ್ಟಾಗಿ ಇರಲಿಲ್ಲ, ಅಗತ್ಯ ವಸ್ತುಗಳ ಬೆರಳೆಣಿಕೆಯಷ್ಟು ಅಂಗಡಿಗಳು ತೆರೆದಿದ್ದವಾದರೂ ವ್ಯಾಪಾರವಿಲ್ಲದೆ ಬಣಗುಡುತ್ತಿದ್ದವು.
ಕೊಡಗು ಜಿಲ್ಲೆಯ ಗಡಿಭಾಗಗಳು ಹಾಗೂ ಕೆಲವು ಪಟ್ಟಣಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸಿ ಅಗತ್ಯವಿರುವವರು ಮಾತ್ರ ಸಂಚರಿಸಲು ಅನುವು ಮಾಡಿಕೊಟ್ಟರು. ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ದಂಡ ವಿಧಿಸಿ ಕಾನೂನಿನ ಬಿಸಿ ಮುಟ್ಟಿಸಿದರು.