Tuesday, March 28, 2023

Latest Posts

ವೀಕೆಂಡ್ ವಿತ್ ರಮೇಶ್ ಶೋ ಡೇಟ್ ಅನೌನ್ಸ್, ಮೊದಲ ಸಾಧಕ ಇವರೇ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅನೇಕ ಸಾಧಕರ ಜೀವನದ ಸಿಹಿ-ಕಹಿಯನ್ನು ಜನರಿಗೆ ತೋರಿಸುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಎಲ್ಲಾ ಸೀಸನ್ಸ್ ಹಿಟ್ ಆಗಿವೆ. ಇದೀಗ ಮತ್ತೊಂದು ಸೀಸನ್ ಡೇಟ್ ಅನೌನ್ಸ್ ಮಾಡಿದ್ದು, ಮೊದಲು ಸಾಧಕರ ಕುರ್ಚಿಯಲ್ಲಿ ಕೂರೋದು ಯಾರು ಎನ್ನುವ ಊಹೆ ಆರಂಭವಾಗಿದೆ.

ಇದೇ ಮಾರ್ಚ್ 25 ರಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಶನಿವಾರ ಹಾಗೂ ಭಾನುವಾರ ರಾತ್ರಿ 9 ಕ್ಕೆ ಪ್ರಸಾರವಾಗಲಿದೆ. ಪ್ರತಿ ಸೀಸನ್‌ನಂತೆ ಈ ಬಾರಿಯೂ ರಮೇಶ್ ಅರವಿಂದ್ ಹೋಸ್ಟ್ ಮಾಡುತ್ತಿದ್ದು, ಗೆಸ್ಟ್ ಯಾರಾಗಿರಬಹುದು ಎನ್ನುವ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್, ರಮ್ಯಾ, ರಿಷಭ್ ಶೆಟ್ಟಿ ಹೀಗೆ ಸಾಕಷ್ಟು ಜನರ ಹೆಸರು ಕೇಳಿ ಬರುತ್ತಿದ್ದು, ಗ್ರ್ಯಾಂಡ್ ಎಂಟ್ರಿಗಾಗಿ ಕಾಂತಾರ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿಯನ್ನು ಗ್ರ್ಯಾಂಡ್ ಆಗಿಸಿದ ರಿಷಭ್ ಮೊದಲನೇ ಸಾಧಕ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!