ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲೆಂಡ್‌ನ ಕೆರ್ಮಾಡೆಕ್ ದ್ವೀಪಗಳ ಪ್ರದೇಶದಲ್ಲಿ ಶನಿವಾರ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ವರದಿ ಮಾಡಿದೆ.
ಭೂಕಂಪವು 03:44:10 (UTC+05:30) ಕ್ಕೆ ಸಂಭವಿಸಿದ್ದು, ಶನಿವಾರ ನ್ಯೂಜಿಲೆಂಡ್‌ನ ಕೆರ್ಮಾಡೆಕ್ ದ್ವೀಪಗಳನ್ನು 10 ಕಿಮೀ ಆಳದಲ್ಲಿ ಅಪ್ಪಳಿಸಿದೆ. ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಗುರುವಾರ ಕೂಡ 6.8 ತೀವ್ರತೆಯ ಭೂಕಂಪವು ಕೆರ್ಮಾಡೆಕ್ ದ್ವೀಪಗಳ ಪ್ರದೇಶದಲ್ಲಿ ಅಪ್ಪಳಿಸಿತ್ತು ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ.