September 30, 2026
Wednesday, September 30, 2026
spot_img

ಕೋಟ್ಯಂತರ ಪುಷ್ಪಗಳನ್ನು ಕಣ್ತುಂಬಿಕೊಳ್ಳಲು ಮತ್ತೆ ಕಾಯಲೇಬೇಕು: ಇಂದು ಫ್ಲವರ್‌ ಶೋ ಲಾಸ್ಟ್‌ ಡೇ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವರ್ಷಕ್ಕೆ ಎರಡು ಬಾರಿ ನಡೆಯುವ ಬೆಂಗಳೂರಿನ ಲಾಲ್‌ಬಾಗ್‌ ಫ್ಲವರ್‌ ಶೋ ಎಂದರೆ ಜನರಿಗೆ ಅಚ್ಚುಮೆಚ್ಚು. ಸಿಲಿಕಾನ್‌ ಸಿಟಿಯ ಮಂದಿ ದಾಖಲೆಯ ಸಂಖ್ಯೆಯಲ್ಲಿ ಸಸ್ಯಕಾಶಿಗೆ ಭೇಟಿ ನೀಡಿ ಫ್ಲವರ್‌ ಶೋ ಯಶಸ್ವಿಗೊಳಿಸಿದ್ದಾರೆ. ಇಂದು ಫ್ಲವರ್‌ ಶೋ ಕಡೆಯ ದಿನವಾಗಿದ್ದು, ವೀಕ್‌ ಡೇ ಆದರೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದೆ.

3 ಕೋಟಿ ರೂ ಆದಾಯ

ಬೆಂಗಳೂರಿನಲ್ಲಿ ನಡೆದ 220ನೇ ಫಲ ಪುಷ್ಪ ಪ್ರದರ್ಶನ ಇದಾಗಿದ್ದು, 11 ದಿನದಲ್ಲಿ 9.5 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದು, 3 ಕೋಟಿ ರೂ ಆದಾಯ ಗಳಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ದಾಖಲೆ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದಾರೆ. ಗಾಜಿನ ಮನೆಯೊಳಗೆ ಕಂಗೊಳಿಸುತ್ತಿರುವ ಗಂಗರ ಸಾಮ್ರಾಜ್ಯ ವೈಭವನನ್ನು ಜನ ಕಣ್ತುಂಬಿಕೊಂಡಿದ್ದಾರೆ. ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದು, ಫ್ಲವರ್‌ ಶೋ ಆಯೋಜಕರು ತೃಪ್ತಿ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

ರುಚಿ ರುಚಿಯ ಖಾದ್ಯ, ಆರ್ಗಾನಿಕ್‌ ಹಬ್ಬ

ಫ್ಲವರ್‌ ಶೋನಲ್ಲಿ ವಿವಿಧ ಆರ್ಗಾನಿಕ್‌ ಪದಾರ್ಥಗಳು, ಊಟ ಉಪಹಾರಗಳು, ನೀರಾ, ಸೀರೆ, ಮರದ ಉತ್ಪನ್ನಗಳು, ಹರ್ಬಲ್‌ ಟೀ, ಡ್ರೈ ಫ್ರೂಟ್ಸ್‌ ಉತ್ಪನ್ನ ಸೇರಿದಂತೆ ಸಾಕಷ್ಟು ರೀತಿಯ ಸ್ಟಾಲ್‌ಗಳನ್ನು ಹಾಕಲಾಗಿತ್ತು. ಸ್ವಾತಂತ್ರ್ಯ ದಿನಾಚರಣೆಯ ರಜೆದಿನದಂದು ಬರೋಬ್ಬರಿ ಎರಡು ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಈ ಬಾರಿಯ ಫ್ಲವರ್‌ ಶೋನಲ್ಲಿ ಶಾಲಾ ಯುನಿಫಾರ್ಮ್‌ ಹಾಕಿದ್ದ ಮಕ್ಕಳಿಗೆ ಫ್ರೀ ಎಂಟ್ರಿ ಇದ್ದ ಕಾರಣ, ನಿತ್ಯವೂ ಹತ್ತಾರು ಶಾಲೆಯ ಮಕ್ಕಳು ಫ್ಲವರ್‌ ಶೋ ನೋಡಲು ಆಗಮಿಸಿದ್ದಾರೆ. ಇಷ್ಟೊಂದು ಬಗೆಬಗೆಯ ಹೂವುಗಳನ್ನು ನೋಡಿ ಪುಟ್ಟ ಮಕ್ಕಳು ಖುಷಿ ಪಟ್ಟಿದ್ದು, ಶಿಕ್ಷಕರು ಗಂಗರ ಇತಿಹಾಸ ಹಾಗೂ ಸಾಮ್ರಾಜ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಇನ್ನೂ ಫ್ಲವರ್‌ ಶೋ ನೋಡಿಲ್ಲ ಎಂದಾದರೆ ಈಗಲೇ ಲಾಲ್‌ಬಾಗ್‌ನತ್ತ ಹೆಜ್ಜೆ ಹಾಕಿ, ಯಾಕಂದ್ರೆ ಈ ವಿಧವಿಧವಾದ ಹೂವುಗಳನ್ನು ನೋಡೋದಕ್ಕೆ ಮತ್ತೆ ಆರು ತಿಂಗಳು ಕಾಯಬೇಕಾಗುತ್ತದೆ!

Must Read