ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಂಧೀನಗರದ ಮೊರ್ಬಿ ತಾಲೂಕಿನ ವಿರ್ಪರ್ದಾ ಗ್ರಾಮದಲ್ಲಿರುವ ದೊಡ್ಡ ಬಾವಿಯೊಂದರಲ್ಲಿ ಸಮುದ್ರದಂತಹ ಅಲೆಗಳು ಕಾಣಿಸಿಕೊಂಡಿದ್ದು, ನಮ್ಮೂರಿಗೆ ಏನೋ ಕಂಟಕ ಕಾದಿದೆ ಎಂದು ಗ್ರಾಮಸ್ಥರು ಹೆದರಿದ್ದಾರೆ.
ನಿನ್ನೆ ಮಧ್ಯಾಹ್ನ ಗ್ರಾಮದ ಕೃಷಿ ಬಾವಿಯಲ್ಲಿದ್ದ ನೀರು ಇದ್ದಕ್ಕಿದ್ದಂತೆಯೇ ಚಲಿಸಲು ಆರಂಭಿಸಿದೆ. ಕೆಲ ದಿನಗಳ ಹಿಂದೆಯೂ ಒಮ್ಮೆ ಇದೇ ರೀತಿ ಆಗಿದ್ದು, ಜನರ ಹೆದರಿದ್ದರು. ಇದೀಗ ಮತ್ತೆ ಘಟನೆ ಮರುಕಳಿಸಿದ್ದು ಇದು ಹೇಗೆ ಸಾಧ್ಯ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಬಾವಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳ ಆಧಾರದ ಮೇಲೆ, ಜಿಲ್ಲಾ ಭೂವಿಜ್ಞಾನಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನೀರಿನ ಅಡಿಯಲ್ಲಿ ಸಿಲುಕಿಕೊಂಡಿರುವ ಗಾಳಿಯಿಂದಾಗಿ ಈ ನೀರಿನ ಚಲನೆ ಉಂಟಾಗುತ್ತಿರಬಹುದು ಎಂದು ಅವರ ಪ್ರಾಥಮಿಕ ಅಂದಾಜು ತಿಳಿಸುತ್ತದೆ. ಅಥವಾ ಭೂಮಿಯ ಆಳದಲ್ಲಿ ಸಣ್ಣ ಮಟ್ಟಕ್ಕೆ ಭೂಮಿ ಕಂಪಿಸಿ ಏನಾದ್ರೂ ಈ ರೀತಿ ಆಗಿದ್ಯಾ ಎಂದು ಪರಿಶೀಲನೆ ಮಾಡಲಾಗುತ್ತಿದೆ.
https://www.instagram.com/reel/Dbuq30Itk3P/?igsh=OGR3eW5ocWZpOXF6
ಬಾವಿಯ ನೀರಿನ ಈ ವಿಚಿತ್ರ ವಿದ್ಯಮಾನದ ಬಗ್ಗೆ ತಿಳಿದ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ವೀಕ್ಷಿಸುತ್ತಿದ್ದಾರೆ. ಈ ನಿಗೂಢ ಚಲನೆಗೆ ನಿಖರವಾದ ಕಾರಣವಿನ್ನೂ ತಿಳಿದುಬಂದಿಲ್ಲ. ಆದರೂ, ಮೊರ್ಬಿ ಪ್ರದೇಶವು ಭೂಕಂಪನ ಸಂಭವನೀಯ ವಲಯವಾಗಿರುವುದರಿಂದ, ಇದು ಪ್ರಾದೇಶಿಕ ಭೂಕಂಪನ ಚಟುವಟಿಕೆಗಳಿಗೆ ಸಂಬಂಧಿಸಿರಬಹುದು ಎನ್ನಲಾಗಿದೆ.



