ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಯಕ ಕೃಷ್ಣ ಕುಮಾರ್ ಕುನ್ನತ್ ಸಾವಿಗೆ ಇಡೀ ದೇಶವೇ ದುಃಖಸಾಗರದಲ್ಲಿ ಮುಳುಗಿದ್ದು, ಈ ನಡುವೆ ಅವರ ಸಾವಿಗೂ ಮುನ್ನ ಆದ ಕೆಲ ಪ್ರಮಾದಗಳಿಂದ ಅವರ ಪ್ರಾಣಕ್ಕೆ ಕುತ್ತು ಬಂದಿತ್ತು ಎಂಬ ಆರೋಪಗಳು ಕೇಳಿಬರುತ್ತಿವೆ.
ಇದರ ನಡುವೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಖರ್ ಹೇಳಿಕೆ ಮತ್ತಷ್ಟು ಪುಷ್ಟಿ ನೀಡುವಂತಾಗಿದೆ.
ಸಂಗೀತ ಕಾರ್ಯಕ್ರಮ ಆಯೋಜಿಸಿದ್ದ ಆಯೋಜಕರು ಮಾಡಿದ ಕೆಲ ತಪ್ಪಿನಿಂದಾಗಿ ಇಂದು ಸಂಗೀತ ಲೋಕದ ಖ್ಯಾತ ಗಾಯಕನನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಕಾರ್ಯಕ್ರಮ ಪ್ರಾರಂಭದಲ್ಲೇ ಕೆಕೆ ಅವರ ದೇಹದಲ್ಲಿ ಬದಲಾವಣೆ ಕಂಡುಬಂದಿದೆ. ಹಲವು ಜನರು ನನಗೂ ಅವರ ಕಾರ್ಯಕ್ರಮದ ವಿಡಿಯೋವನ್ನು ಕಳುಹಿಸಿದ್ದಾರೆ. ಅದನ್ನು ನೋಡಿ ನಾನೇ ಶಾಕ್ಗೆ ಒಳಗಾಗಿದ್ದೇನೆ. ಭಾರೀ ಉತ್ಸಾಹದಲ್ಲಿದ್ದ ಅವರ ದೇಹದಲ್ಲಿ ಬದಲಾವಣೆ ಕಂಡುಬಂದಾಗಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೆ ಬದುಕಿರುತ್ತಿದ್ದರು ಎಂದು ಹೇಳಿದ್ದಾರೆ.
ಇದಕ್ಕೆಲ್ಲಾ ಮ್ಯಾನೇಜ್ಮೆಂಟ್ ಹೊಣೆಯಾಗಲಿದ್ದು, ಕಡಿಮೆ ಜನರು ಸೇರುವ ಜಾಗದಲ್ಲಿ ಸಾವಿರಾರು ಮಂದಿಯನ್ನು ಸೇರಿಸಿದ್ದೂ ಕೂಡ ಅವರಿಗೆ ತೊಂದರೆ ಎನಿಸಿದೆ. ಹಾಡು ಹಾಡುತ್ತಲೇ ಅವರ ಮುಖಭಾವದಲ್ಲಿ ಸಾಕಷ್ಟು ಬದಲಾವಣೆಯಾಗುತ್ತೆ. ಆದರೂ ಕೂಡ ಆಯೋಜಕರು ಮಾತ್ರ ತಲೆಕೆಡಿಸಿಕೊಂಡಿಲ್ಲದಿರುವುದು ವಿಷಾದನೀಯ ಎಂದು ರಾಜ್ಯಪಾಲರು ಹೇಳಿಕೆ ನೀಡಿದ್ದಾರೆ.