ಜಪಾನ್‌ನಲ್ಲಿ ಜ್ವಾಲಾಮುಖಿ ಸ್ಫೋಟ: ಹೈ ಅಲರ್ಟ್ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಪಾನ್‌ನಲ್ಲಿ ಬೃಹತ್ ಜ್ವಾಲಾಮುಖಿ ಸ್ಫೋಟಗೊಂಡಿದೆ. ಜಪಾನ್‌ನ ಉತ್ತರ ಭಾಗದಲ್ಲಿರುವ ಕ್ಯುಶು (ಸಕುರಾಜಿಮಾ) ಪರ್ವತ ಶ್ರೇಣಿಯಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಭಾರತೀಯ ಕಾಲಮಾನದ ಪ್ರಕಾರ, ಭಾನುವಾರ ಸಂಜೆ ಪರ್ವತ ಕುಸಿದು ಲಾವಾ ಚಿಮ್ಮಿದೆ ಎಂದು ಜಪಾನ್ ಹವಾಮಾನ ಇಲಾಖೆ (ಜೆಎಂಎ) ಬಹಿರಂಗಪಡಿಸಿದೆ.

ಇದರ ಪರಿಣಾಮ ಗಂಭೀರವಾಗಿರುವುದರಿಂದ ಐದನೇ ಅಪಾಯದ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಇದರ ಪರಿಣಾಮ ತೀವ್ರವಾಗಿದ್ದು, ಸುಮಾರು ಎರಡೂವರೆ ಕಿಲೋಮೀಟರ್ ವರೆಗೆ ಲಾವಾದ ಬೆಂಕಿ ಉಂಡೆಗಳನ್ನು ಎಸೆಯಲಾಗುತ್ತಿದೆ. ಕುದಿಯುತ್ತಿರುವ ಬೆಂಕಿ ಬಂಡೆಗಳು ಹಾರುತ್ತಿರುವುದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರನ್ನು ಕೂಡಲೇ ತೆರವು ಮಾಡಿಸಿ ಎಂದು ಅಧಿಕಾರಿಗಳು ಸೂಚಿಸಿದರು.

ಕಾಗೋಶಿಮಾ ಎಂಬ ಪಟ್ಟಣವು ಈಗ ಸುಪ್ತವಾಗಿರುವ ಜ್ವಾಲಾಮುಖಿಯ ಸಮೀಪದಲ್ಲಿದೆ. ಇಲ್ಲಿ ಸುಮಾರು ಆರು ಲಕ್ಷ ಜನ ವಾಸಿಸುತ್ತಿದ್ದಾರೆ. ಸಕುರಾಜಿಮಾ ಜಪಾನ್‌ನ ಅತ್ಯಂತ ಅಪಾಯಕಾರಿ ಜ್ವಾಲಾಮುಖಿಯಾಗಿದೆ. 2019 ರಲ್ಲಿ, ಲಾವಾ 5.5 ಕಿಲೋಮೀಟರ್ಗಳಷ್ಟು ಹರಿದಿತ್ತು. ಜಪಾನ್‌ನ ಭೂಪ್ರದೇಶ ಹೆಚ್ಚಾಗಿ ಟೆಕ್ಟೋನಿಕ್ ಪ್ಲೇಟ್‌ಗಳೊಳಗೆ ಇರುವುದರಿಂದ, ಭೂಕಂಪಗಳು, ಜ್ವಾಲಾಮುಖಿಗಳು ಮತ್ತು ಸುನಾಮಿಗಳು ಉಂಟಾಗುತ್ತವೆ. ಜಗತ್ತಿನಲ್ಲಿ ವಾರ್ಷಿಕವಾಗಿ ದಾಖಲಾಗುವ ಭೂಕಂಪಗಳಲ್ಲಿ ಶೇಕಡ 20ರಷ್ಟು ಜಪಾನಿನಲ್ಲಿ ದಾಖಲಾಗಿರುವುದು ಗಮನಾರ್ಹ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!