ಮುಂಬೈ ನಿಲ್ದಾಣಕ್ಕೆ ಬಂದಿಳಿದ ತಿಮಿಂಗಲ ವಿಮಾನ: ಏರ್​ಬಸ್​ ಬೆಲುಗಾ ಕಂಡು ಅಚ್ಚರಿಕೊಂಡ ಜನತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ನ ಛತ್ರಪತಿ ಶಿವಾಜಿ ಮಹಾರಾಜ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ದೊಡ್ಡ ತಿಮಿಂಗಲ ಆಕೃತಿಯ ಏರ್​ಬಸ್​ ಬೆಲುಗಾ ಸರಕು ಸಾಗಣೆ ವಿಮಾನ ಆಗಮನವಾಗಿತ್ತು. ಈ ವಿಮಾನದ ಆಕೃತಿ ಪ್ರಯಾಣಿಕರನ್ನು ಅಚ್ಚರಿಗೆ ದೂಡಿತು.

A300 -600ST ಸೂಪರ್ ಟ್ರಾನ್ಸ್‌ಪೋರ್ಟರ್ ಎಂದು ಕರೆಯಲ್ಪಡುವ ಏರ್‌ಬಸ್ ಬೆಲುಗಾ ದೈತ್ಯ ಗಾತ್ರದ ಸರಕು ಸಾಗಣೆ ವಿಮಾನವನ್ನು 1990 ರ ದಶಕದಿಂದ ಕೈಗಾರಿಕಾ ಏರ್‌ಲಿಫ್ಟ್​ಗಾಗಿ ಬಳಸಲಾಗುತ್ತದೆ.

ಈ ವಿಮಾನದ ವಿಶೇಷತೆ ಏನೆಂದರೆ, ಏರ್​ಬಸ್​ ಬೆಲುಗಾ ವಿಮಾನದ ಮುಂಭಾಗ ತಿಮಿಂಗಿಲದ(ವೇಲ್ಸ್​) ಮೂಗಿನ ಆಕಾರ ಹೊಂದಿದೆ. ಇದು ವಿಶ್ವದ ಅತಿದೊಡ್ಡ ಸರಕು ವಿಮಾನಗಳಲ್ಲಿಯೂ ಒಂದಾಗಿದೆ. ಬಾಹ್ಯಾಕಾಶ, ಇಂಧನ, ಮಿಲಿಟರಿ, ಏರೋನಾಟಿಕ್ಸ್ ಒಳಗೊಂಡಂತೆ ವಿವಿಧ ವಲಯಗಳ ಸರಕು ಸಾಗಣೆ ಸೇವೆ ನೀಡುತ್ತದೆ. ಇದರ ಗಾತ್ರ 56 ಮೀಟರ್ ಉದ್ದ ಮತ್ತು 45 ಮೀಟರ್ ಅಗಲವಿದೆ.

ದೈತ್ಯ ತಿಮಿಂಗಲಾಕಾರದ ವಿಮಾನದ ಚಿತ್ರಗಳನ್ನು ವಿಮಾನ ನಿಲ್ದಾಣದ ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಏರ್​ಬಸ್​ ಬೆಲುಗಾ ಮೊದಲ ಬಾರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಇದು ನಮ್ಮೆಲ್ಲರನ್ನೂ ಬೆರಗುಗೊಳಿಸಿತು ಎಂದು ಬರೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!