ಯುಪಿಯಲ್ಲಿ 10 ಕೋಟಿ ಮೌಲ್ಯದ ತಿಮಿಂಗಿಲದ ವಾಂತಿ ಪೊಲೀಸರ ವಶಕ್ಕೆ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಂಬರ್ ಗ್ರಿಸ್ ಎಂದರೆ ತಿಮಿಂಗಿಲದ ವಾಂತಿ. ಸಮುದ್ರಗಳಲ್ಲಿ ವಾಸಿಸುವ ತಿಮಿಂಗಿಲಗಳ ವಾಂತಿಗೆ ಉತ್ತಮ ಬೇಡಿಕೆಯಿದೆ. ಏಕೆಂದರೆ ತಿಮಿಂಗಿಲ ವಾಂತಿಯನ್ನು ಸುಗಂಧ ದ್ರವ್ಯಗಳು, ಸೌಂದರ್ಯವರ್ಧಕಗಳು ಮತ್ತು ಔಷಧಿಗಳಲ್ಲಿ ಬಳಸುವುದರಿಂದ ಅದಕ್ಕೆ ಉತ್ತಮ ಬೆಲೆಯಿದೆ. ಭಾರತದಲ್ಲಿ ತಿಮಿಂಗಿಲ ವಾಂತಿ ಮಾರಾಟಕ್ಕೆ ನಿಷೇಧವಿದೆ.

ನಿಷೇಧವಿದ್ದರೂ ಉತ್ತರ ಪ್ರದೇಶದಲ್ಲಿ ತಿಮಿಂಗಿಲ ವಾಂತಿ ಮಾರಾಟ ಮಾಡುತ್ತಿದ್ದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ರೂ.10 ಕೋಟಿ ಮೌಲ್ಯದ 4.12 ಕೆಜಿ ತೂಕದ ತಿಮಿಂಗಿಲ ವಾಂತಿಯನ್ನು ವಶಪಡಿಸಿಕೊಳ್ಳಲಾಗಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 10 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಖಚಿತ ಮಾಹಿತಿಯೊಂದಿಗೆ ಉತ್ತರ ಪ್ರದೇಶ ಪೊಲೀಸ್ ವಿಶೇಷ ಕಾರ್ಯಪಡೆ  (UPSTF) ಲಕ್ನೋದ ಗೋಮ್ತಿನಗರ ಪ್ರದೇಶದಲ್ಲಿ ದಾಳಿ ನಡೆಸಿ ಈ ದಾಳಿಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ.

ಕಳೆದ ಜುಲೈನಲ್ಲಿ ಕೇರಳದ ಮೀನುಗಾರರು ಸಮುದ್ರದಲ್ಲಿ ಮೀನು ಹಿಡಿಯಲು ಹೋದಾಗ 28 ಕೋಟಿ ರೂಪಾಯಿ ಮೌಲ್ಯದ ತಿಮಿಂಗಿಲ ವಾಂತಿ ಸಿಕ್ಕಿದ್ದು, ಅದನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದರು. ಈ ಅಂಬರ್ ಗ್ರೀಸ್ ಎಂಬುದು ತಿಮಿಂಗಿಲಗಳ ಜೀರ್ಣಾಂಗ ವ್ಯವಸ್ಥೆಯಿಂದ ಬಾಯಿಯ ಮೂಲಕ ಹೊರಹಾಕಲ್ಪಡುವ ವಸ್ತುವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!