Wednesday, October 5, 2022

Latest Posts

ನೀಟ್ ಫಲಿತಾಂಶ- ರಾಷ್ಟ್ರೋತ್ಥಾನದ ಸಾಧನಾ ತರಬೇತಿಯ ವಿದ್ಯಾರ್ಥಿನಿಯರ ಯಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2022ರ ನೀಟ್ ಪರೀಕ್ಷೆಯಲ್ಲಿ ಸಾಧನಾದ ವಿದ್ಯಾರ್ಥಿನಿಯರ ಸಾಧನೆ ಎಲ್ಲರೂ ಮೆಚ್ಚುವಂತಿದೆ. ರಾಷ್ಟ್ರೋತ್ಥಾನದ ಸಾಧನಾ ಯೋಜನೆಯಡಿಯಲ್ಲಿ ಉಚಿತ ಶಿಕ್ಷಣ ಪಡೆದಿರುವ ಬಾಲಕಿಯರು ಉತ್ತಮ ಸಾಧನೆ ಮಾಡಿದ್ದಾರೆ. ಇವರೆಲ್ಲರೂ ಶ್ರೀಮಂತರ ಮಕ್ಕಳೇನಲ್ಲ, ಗ್ರಾಮೀಣ ಭಾಗದ ಕನ್ನಡ ಮಾಧ್ಯಮದಲ್ಲಿ ಓದಿರುವ ಆರ್ಥಿಕವಾಗಿ ಹಿಂದುಳಿದ ಬಡಕುಟುಂಬದಿಂದ ಬಂದ ಹೆಣ್ಣುಮಕ್ಕಳಾಗಿದ್ದಾರೆ. ಅವರಲ್ಲಿ ರಾಯಚೂರಿನ ಭಾವನ 1890 ಅಖಿಲ ಭಾರತ ರ್ಯಾಂಕ್ ಹಾಗೂ ವರ್ಗವಾರು 188ನೇ ರ್ಯಾಂಕ್‌ ಪಡೆದು 2020-22ರ ಬ್ಯಾಚ್‌ನ ಮೊದಲಿಗಳಾಗಿದ್ದಾಳೆ. ಹಾಗೆಯೇ ಮಂಡ್ಯದ ನೇಹಾ ಎಂ.ಬಿ- 9921, ತುಮಕೂರಿನ ದೀಪಿಕಾ ಎ.ಸಿ. 14171, ಚಿಕ್ಕಬಳ್ಳಾಪುರದ ಚೈತನ್ಯ ಎಂ.ಆರ್- 40295, ಬಳಗಾವಿಯ ಸ್ವಪ್ನ ಚವ್ಹಾಣ್- 42869, ಚಿಕ್ಕಬಳ್ಳಾಪುರದ‌ ಕೀರ್ತನಾ ಬಿ- 50214 ಹಾಗೂ ರಾಮನಗರದ ಭೂಮಿಕಾ ಎಚ್.ಜೆ-53887ನೇ ರ್ಯಾಂಕ್‌ ಪಡೆದು ಸಾಧನಾದ ಗರಿಮೆ ಹೆಚ್ಚಿಸಿದ್ದಾರೆ.

ಈ ವರ್ಷದ ದ್ವಿತೀಯ ಪಿ.ಯು.ಸಿ. ಹಾಗೂ NEET ಪರೀಕ್ಷೆಗಳಲ್ಲಿ ಸಾಧನಾದ ಸುಮಾರು 70 ವಿದ್ಯಾರ್ಥಿನಿಯರು ಒಳ್ಳೆಯ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಚಿಂತನೆಯನ್ನು ಆದ್ಯತೆಯಲ್ಲಿಟ್ಟುಕೊಂಡು ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ರಾಷ್ಟ್ರೋತ್ಥಾನ ಪರಿಷತ್‌ ಈ ಸಾಧನಾ ಎಂಬ ಯೋಜನೆಯನ್ನು ನಡೆಸಿಕೊಂಡು ಬರುತ್ತಿದೆ. ಗ್ರಾಮೀಣ ಭಾಗದ ಹಾಗೂ ವೈದ್ಯಕೀಯ ಶಿಕ್ಷಣವನ್ನು ಇಚ್ಛೆ ಹೊಂದಿರುವ ಪ್ರತಿಭಾನ್ವಿತ ಹೆಣ್ಣುಮಕ್ಕಳಿಗೆ ಆದ್ಯತೆ ನೀಡಲಾಗುತ್ತದೆ. ಉಚಿತ ಊಟ, ವಸತಿ ವ್ಯವಸ್ಥೆಗಳನ್ನು ಸಹ ಒದಗಿಸಲಾಗುತ್ತದೆ.

ಸಾಧನಾ ಈ ವರ್ಷವೂ ಸಹ ಪ್ರವೇಶ ಅರ್ಜಿಯನ್ನು ಬಿಡುಗಡೆ ಮಾಡಿದೆ ಆಸಕ್ತರು ಸಪ್ಟೆಂಬರ್‌ 15 ರಿಂದ ಡಿಸೆಂಬರ್‌ 10ರೊಳಗಾಗಿ ಅರ್ಜಿ ಭರ್ತಿ ಮಾಡಿ ಆನ್‌ಲೈನ್‌ ಮೂಲಕ ಕಳಿಸಿಕೊಡಬಹುದು.

ಅಂತರ್ಜಾಲ ತಾಣ: www.tapassaadhana.org
ಹೆಚ್ಚಿನ ವಿವರಕ್ಕಾಗಿ 94812 01144/ 98446 02529/ 79759 13828 ಸಂಪರ್ಕಿಸಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!