ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಕೆಟ್ ಸಿಗದೆ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರೋದಕ್ಕೆ ಲಕ್ಷ್ಮಣ ಸವದಿ ತಯಾರಾಗಿದ್ದಾರೆ.
ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿಗೆ ಠಕ್ಕರ್ ಕೊಡೋದಕ್ಕೆ ಡಿ.ಕೆ.ಶಿವಕುಮಾರ್ ಸಿದ್ಧರಾಗಿದ್ದು, ಸವದಿ ಪಕ್ಷಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ.
ಕಾಂಗ್ರೆಸ್ ಸೇರಲು ಪಕ್ಷದ ನಾಯಕರಲ್ಲ ಸವದಿ ಕೆಲ ಬೇಡಿಕೆಗಳನ್ನು ಇಟ್ಟಿದ್ದಾರೆ. ಕಾಗವಾಡ ಹಾಗೂ ಅಥಣಿ ಜವಾಬ್ದಾರಿಯನ್ನು ಸವದಿ ಕೇಳಿದ್ದಾರೆ. ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ನನ್ನದು, ನನಗೆ ಹಾಗೂ ನನ್ನ ಮಗನಿಗೆ ಟಿಕೆಟ್ ಕೊಡಿಸಿ ಎಂದು ಬೇಡಿಕೆ ಇಟ್ಟಿದ್ದಾರೆ.
ಡಿಕೆಶಿ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೈಕಮಾಂಡ್ ಜತೆ ಚರ್ಚಿಸುತ್ತೇವೆ ಎಂದಿದ್ದಾರೆ. ಅಕಸ್ಮಾತ್ ಒಂದು ಕ್ಷೇತ್ರದ ಟಿಕೆಟ್ ಮಾತ್ರ ಸಿಕ್ಕರೂ ಸಹಕಾರ ನೀಡಿ ಎಂದು ಕಾಂಗ್ರೆಸ್ ಮನವಿ ಮಾಡಿದೆ. ಇದಕ್ಕೆ ಸವದಿ ಸಂಪೂರ್ಣವಾಗಿ ಒಪ್ಪದೇ ಎರಡು ಟಿಕೆಟ್ ಕೊಡಿ, ಹೈಕಮಾಂಡ್‌ಗೆ ಇದನ್ನು ಮನವರಿಕೆ ಮಾಡಿಕೊಡಿ. ಅಥಣಿ ಬಗ್ಗೆ ಚಿಂತೆಯಿಲ್ಲ, ಕಾಗವಾಡಕ್ಕೆ ಹೆಚ್ಚಿನ ಎಫರ್ಟ್ ಬೇಕು ಎಂದು ಸವದಿ ಮನವಿ ಮಾಡಿದ್ದಾರೆ.