ONLINE SHOPPING | ಆನ್‌ಲೈನ್ ಶಾಪಿಂಗ್‌ನಿಂದ ಆಗುವ ಲಾಭಗಳೇನು?

ಇತ್ತೀಚೆಗೆ ಅಂಗಡಿಗೆ ಹೋಗಿ ಶಾಪಿಂಗ್ ಮಾಡುವವರ ಸಂಖ್ಯೆಗಿಂತ ಮನೆಯಲ್ಲಿಯೇ ಕುಳಿತು ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿಯೇ ಕುಳಿತು ಶಾಪಿಂಗ್ ಮಾಡುವುದರಿಂದ ಏನೆಲ್ಲಾ ಲಾಭ ಇದೆ ನೋಡಿ..

  • ಶಾಪಿಂಗ್ ಮಾಡೋಕೆ ಹೊರಗೆ ಹೋಗೋಕೆ ಗಾಡಿ, ಆಟೋ, ಕಾರ್ ಬೇಕು ಇದರ ಪೆಟ್ರೋಲ್ ಖರ್ಚು ಉಳಿಯುತ್ತದೆ.
  • ಆನ್‌ಲೈನ್‌ನಲ್ಲಿ ಸಿಗುವಷ್ಟು ಆಫರ್‌ಗಳು ಹಾಗೂ ವೆರೈಟಿ ಅಂಗಡಿಯಲ್ಲಿ ಸಿಗೋದಿಲ್ಲ.
  • ನಿಮಗಿಷ್ಟದ ಸೈಜ್ ಸಿಗೋದು ಆನ್‌ಲೈನ್‌ನಲ್ಲಿ
  • ಬಟ್ಟೆಗಳನ್ನು ತರಿಸಿ ಹಾಕಿ, ಒಂದಿಬ್ಬರಿಗೆ ತೋರಿಸಿ ಬೇಕಾ ಬೇಡವಾ ಯೋಚಿಸಿ, ವಾಪಾಸ್ ಮಾಡಬಹುದು. ಆದರೆ ಅಂಗಡಿಗೆ ಹೋದರೆ ಅಲ್ಲೇ ಡಿಸೈಡ್ ಮಾಡಬೇಕು.
  • ಮನೆಯಲ್ಲಿ ಶಾಪಿಂಗ್ ಮಾಡುವವರಿಗೆ ಬೇರೆ ಖರ್ಚಿಲ್ಲ, ಶಾಪಿಂಗ್‌ಹೋದರೆ ತಿನ್ನೋದಕ್ಕೆ ಹೆಚ್ಚು ಖರ್ಚಾಗುತ್ತದೆ.
  • ಮನೆಯಲ್ಲಿ ಕುಳಿತಲ್ಲೇ ಶಾಪಿಂಗ್ ಮಾಡುವುದರಿಂದ ಸಮಯ ಸಾಕಷ್ಟು ಉಳಿತಾಯ.
  • ಮೇಕಪ್ ಇಲ್ಲದೆ ಹೊರಗೆ ಹೋಗೋದು ಕಷ್ಟ ಅನ್ನುವವರಿಗೆ ಮೇಕಪ್ ಕೂಡ ಉಳಿಯುತ್ತದೆ.
  • ಯಾವುದಾದರೂ ಪ್ರಾಡಕ್ಟ್ ಡ್ಯಾಮೇಜ್ ಇದ್ದು ಮನೆಗೆ ಬಂದು ನೋಡಿದರೆ ಆ ಪ್ರಾಡಕ್ಟ್ ಮತ್ತೆ ವಾಪಾಸು ಪಡೆಯೋದಿಲ್ಲ. ಆತರ ಆನ್‌ಲೈನ್‌ನಲ್ಲಿ ವಾಪಾಸು ಪಡೆಯುತ್ತಾರೆ. ಸೂಕ್ತ ಹಣ ಕೂಡ ನೀಡುತ್ತಾರೆ.
  • ಒಂದು ಕಡೆ ಬಟ್ಟೆ ಅಥವಾ ಯಾವುದೇ ವಸ್ತು ಸಿಕ್ಕಿಲ್ಲ ಎಂದರೆ ಇನ್ನೊಂದು ಕಡೆ ಹೋಗಬೇಕು, ಆದರೆ ಪ್ರತಿ ವಸ್ತುವೂ ಬೆರೆಳ ತುದಿಯಲ್ಲೇ ಸಿಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!