ಪ್ರತಿ ಬಾರಿ ಆನಿವರ್ಸರಿ ಮರೆಯೋ ಪತ್ನಿಗೆ ಆಯುಷ್ಮಾನ್ ಖುರಾನಾ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್ ಪತಿಯ ಜೊತೆ ಚಂದದ ಫೋಟೊವೊಂದನ್ನು ಅಪ್‌ಲೋಡ್ ಮಾಡಿದ್ದಾರೆ.

ಆದರೆ ಆನಿವರ್ಸರಿಗೆ ಒಂದು ದಿನ ಮುನ್ನವೇ ಫೋಟೊ ಪೋಸ್ಟ್ ಮಾಡಿದ್ದಾರೆ. ಎಲ್ಲರೂ ನನ್ನ ನೆನಪಿನ ಶಕ್ತಿಯನ್ನು ಗೇಲಿ ಮಾಡ್ತೀರಿ, ಅದು ಹೌದು, ಫೋಟೊ ಅಪ್‌ಲೋಡ್ ಮಾಡಿದ ಮೇಲೆ ನನ್ನ ಸ್ನೇಹಿತೆ ರೋಹಿಣಿ ನನ್ನ ಆನಿವರ್ಸರಿ ಇವತ್ತಲ್ಲ, ನಾಳೆ ಎಂದು ಹೇಳಿದರು. ಈಗ ಫೋಟೊ ತೆಗೆಯೋದಿಲ್ಲ, ಹೇಗೂ ನಾಳೆ ಹಾಕಬೇಕಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

Ayushmann Khurrana and Tahira Kashyap fell in love when they were in high school. ಇದಕ್ಕೆ ಆಯುಷ್ಮಾನ್ ರಿಪ್ಲೇ ಮಾಡಿದ್ದು, ಇದಕ್ಕೆ ಇನ್ನೇನು ಹೇಳೋಕೆ ಸಾಧ್ಯ, ಹ್ಯಾಪಿ ಆನಿರ್ವಸರಿ ಇನ್ ಅಡ್ವಾನ್ಸ್ ಎಂದು ಹೇಳಿ ಇಮೋಜಿಗಳನ್ನು ಹಾಕಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಕ್ಯೂಟ್ ಎನಿಸಿದ್ದು, ಅಭಿಮಾನಿಗಳು ತಾಹಿರಾ ಮುಗ್ಧತೆಯನ್ನು ಇಷ್ಟಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!