ಟ್ವಿಟ್ಟರ್​ನ​ ನೂತನ ಬದಲಾವಣೆಗೆ ಬಾಲಿವುಡ್ ನಟಿ ಕಂಗನಾ ರಣಾವತ್​ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್​ ಮಸ್ಕ್​ ಟ್ವಿಟ್ಟರ್ ಅ​ನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಸದಾ ಅನೇಕ ಬದಲಾವಣೆ ಮೂಲಕ ಸುದ್ದಿಯಲ್ಲಿದ್ದು, ಸಂಸ್ಥೆಯ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡುತ್ತಿದ್ದಾರೆ.

ಇದರ ಜೊತೆಗೆ ಎಲಾನ್​ ಮಸ್ಕ್ ‘ಬ್ಲೂ ಟಿಕ್‘​ ಪಡೆಯಲು ಪ್ರತಿ ತಿಂಗಳು ನಿಗದಿತ ಮೂತ್ತವನ್ನು ನೀಡಬೇಕು ಎಂದಿದ್ದಾರೆ.
ಈ ಬಗ್ಗೆ ಅನೇಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಇದೀಗ ಕಂಗನಾ ರಣಾವತ್​ ಟ್ವಿಟ್ಟರ್​ನ​ ನೂತನ ಬದಲಾವಣೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್​ ಇದೊಂದು ‘ಅತ್ಯುತ್ತಮ ಸಾಮಾಜಿಕ ಮಾಧ್ಯಮ’ ಎಂದು ಕರೆದ ಕಂಗನಾ, ಟ್ವಿಟ್ಟರ್​ ಖಾತೆಯನ್ನು ನಿರ್ವಹಿಸಲು ನಿರ್ದಿಷ್ಟ ಮೊತ್ತವನ್ನು ಪಾವತಿಸುವುದು ಅದರ ಸಮಗ್ರತೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಟ್ವಿಟರ್​ ಈಗ ಇರುವ ಉತ್ತಮವಾದ ಮಾಧ್ಯಮ ಬ್ಲೂ ಟಿಕ್​ ಪಡೆಯಲು ಹಣ ನೀಡುವುದು ಒಳ್ಳೆಯದು. ಜಗತ್ತಿನಲ್ಲಿ ಎಲ್ಲಿ ಕೂಡ ಉಚಿತ ಊಟಗಳಿಲ್ಲ, ನೀವು ಉಚಿತವಾಗಿ ಪ್ರವೇಶಿಸುವ ಸಾಮಾಜಿಕ ಜಾಲತಾಣವು ನಮ್ಮ ಡಾಟಾವನ್ನು ತೆಗೆದುಕೊಂಡು ಮಾರಾಟ ಮಾಡುತ್ತಾದೆ. ಇದರ ಬಗ್ಗೆ ಯೋಚಿಸಿದ್ದೀರಾ? ಎಂದು ಬರೆದುಕೊಂಡಿದ್ದಾರೆ.

ಇನ್ನು ಕಂಗನಾ ರಣಾವತ್​ ಅವರ ಟ್ವಿಟರ್​ ಖಾತೆಯನ್ನು ಮೇ 2021 ರಂದು ಶಾಶ್ವತವಾಗಿ ಅಮಾನತುಗೊಳಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!