Wednesday, November 30, 2022

Latest Posts

ಶಾಲೆಗಳಲ್ಲಿ ಧ್ಯಾನ ಕಡ್ಡಾಯ ಆದೇಶ ಸ್ವಾಗತಾರ್ಹ: ಶ್ರೀಶೈಲ ಶ್ರೀ

ಹೊಸದಿಗಂತ ವರದಿ,ವಿಜಯಪುರ:

ಶಾಲೆಗಳಲ್ಲಿ ಧ್ಯಾನ ಕಡ್ಡಾಯ ಆದೇಶವನ್ನು ನಾನು ಸ್ವಾಗತಿಸುತ್ತೇನೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶೀವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಧ್ಯಾನ ಅನ್ನೋದು ಮನಷ್ಯನ ಆರೋಗ್ಯಕ್ಕೆ ಟಾನಿಕ್ ಆಗಿದೆ. ಯಾವುದೇ ರಂಗವಿರಲಿ ಧ್ಯಾನ ಉಪಯುಕ್ತ ಕೆಲಸ ಮಾಡುತ್ತದೆ. ಧ್ಯಾನ ಎಲ್ಲರಿಗೂ ಸಂಬಂಧಪಟ್ಟದ್ದು ಎಂದರು.

ಇನ್ನೂ ಧ್ಯಾನ ಯಾರಿಗೂ ಸೀಮಿತವಾಗಿಲ್ಲ. ಧ್ಯಾನ ಯಾವಾಗಲು ನಮ್ಮ ಶರೀರವನ್ನು ಚೈತನ್ಯಯುಕ್ತವಾಗಿ ಇಡುತ್ತದೆ. ಈ ಆದೇಶವನ್ನ ನಾವು ಹೃತ್ತೂಪರ್ವಕವಾಗಿ ಸ್ವಾಗತಿಸುತ್ತೇವೆ. ಇದನ್ನ ಎಲ್ಲ ಜನರು ಪಾಲಿಸಬೇಕು ಎಂದರು.

ಧ್ಯಾನ ಅನ್ನೋದು ಯಾವುದೇ ಜಾತಿಗೆ ಸೀಮಿತವಲ್ಲ. ಧ್ಯಾನ ಯಾವುದಕ್ಕೂ ಸೀಮಿತವಾಗಿದ್ದಲ್ಲ ಎಂದರು.

ಈ ಸಂದರ್ಭ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಮಾತನಾಡಿ, ನಮ್ಮ ಮಠಗಳು ಉಳಿಯಬೇಕು. ಕರ್ನಾಟಕದಲ್ಲಿ 6800 ಮಠಗಳಿವೆ. ಈ ಮಠಗಳ ರಕ್ಷಣೆ ಆಗಬೇಕು. ಮಠಗಳ ದಾಸೋಹಗಳ ಪರಂಪರೆ ಉಳಿಸಿ ಬೆಳೆಸಬೇಕು. ಹೀಗಾಗಿ ಶ್ರೀಶೈಲ್ ಜಗದ್ಗುರು ಪಾದಯಾತ್ರೆಗೆ ಚಾಲನೆ ನೀಡಿದ್ದು, ಸಾವಿರಾರು ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!