October 16, 2026
Friday, October 16, 2026
spot_img

ಪ್ರಧಾನಿ ಮೋದಿ ಕಿವಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ? ಅವರ ಬಾಯಿಂದ್ಲೇ ಕೇಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಚಿಗಷ್ಟೇ ಪ್ರಧಾನಿ ಮೋದಿ ಆದಿಚುಂಚನಗಿರಿಯ ಮಠಕ್ಕೆ ಭೇಟಿ ನೀಡಿದ್ದರು. ಎಂಬತ್ತು ಕೋಟಿ ರೂಪಾಯಿ ವೆಚ್ಚದ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡಿದ್ದರು.

ಇದಕ್ಕೆ ಬರುವ ಮುನ್ನ ಪ್ರಧಾನಿ ಮೋದಿಯನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದರು. ಭೇಟಿಯ ವೇಳೆ ಪ್ರಧಾನಿ ಸಿಎಂ ಕಿವಿಯಲ್ಲಿ ಏನೋ ಹೇಳುತ್ತಿರುವ ಫೋಟೊವೊಂದು ವೈರಲ್‌ ಆಗಿತ್ತು.

ಅವರಿಬ್ಬರು ಏನು ಮಾತನಾಡುತ್ತಿದ್ದರು ಎನ್ನುವ ಬಗ್ಗೆ ಎಲ್ಲರಿಗೂ ಕುತೂಹಲ ವ್ಯಕ್ತವಾಗಿತ್ತು. ಇದೀಗ ಕುತೂಹಲಕ್ಕೆ ಬ್ರೇಕ್‌ ಬಿದ್ದಿದ್ದು, ಸ್ವತಃ ಸಿಎಂ ಸಿದ್ದರಾಮಯ್ಯರೇ ಏನು ಮಾತಾಡಿದ್ರು ಅನ್ನೋ ಡೀಟೇಲ್ಸ್‌ ನೀಡಿದ್ದಾರೆ.

ವೈರಲ್‌ ಆಗೋ ಅಂತಹ ವಿಷಯ ಏನೂ ಇಲ್ಲ. ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದರು. ಅದಕ್ಕೆ ನಾನು ನನ್ನ ಸಂಪೂರ್ಣ ಸಮ್ಮತಿ ಇದೆ ಎಂದು ಹೇಳಿದ್ದೆ. ಇನ್ನು ಗುಟ್ಟಾಗಿ ಮಾತನಾಡುವಂತದ್ದು ಏನಿರತ್ತೆ ಎಂದು ನಕ್ಕಿದ್ದಾರೆ.

Must Read